ಭಾರತ, ಏಪ್ರಿಲ್ 22 -- ಕರ್ನಾಟಕ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ ಕೊಲೆ ಕೇಸ್‌ನಲ್ಲಿ ಅವರ ಪುತ್ರ ಕಾರ್ತಿಕೇಶ್ ನೀಡಿದ ದೂರಿನ ಪ್ರಕಾರ, ಪೊಲೀಸರು ಅವರ ಪತ್ನಿ ಪಲ್ಲವಿಯನ್ನು ಬಂಧಿಸಿದ್ದಾರೆ. ಪುತ್ರಿ ಕೃತಿಯ ವಿರುದ್ಧವೂ ಆರೋಪ ಇದ್ದು, ಆಕೆ ಅಸ್ವಸ್ಥಗೊಂಡಿರುವ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ, ಹೆಚ್‌ಎಸ್ಆರ್ ಲೇಔಟ್ ಪೊಲೀಸರು ಈ ಕೇಸ್‌ನ ಕಡತಗಳನ್ನು ಸಿಸಿಬಿಗೆ ಹಸ್ತಾಂತರಿಸಲಿದ್ದಾರೆ. ಮುಂದಿನ ತನಿಖೆಯನ್ನು ಸಿಸಿಬಿ ನಡೆಸಲಿದೆ.

ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ಅವರ ದೂರು ಆಧರಿಸಿ, ಪೊಲೀಸರು ಮೃತರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯ ನಡೆದ ಸ್ಥಳ ದಲ್ಲಿ ಪಿಸ್ತೂಲ್, ಚಾಕು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೃತ್ಯದ ಕುರಿತು ಇಬ್ಬರಿಂದಲೂ ಹೇಳಿಕೆ ಪಡೆದುಕೊಂಡ ಬಳಿಕ ಭಾನುವಾರ ರಾತ್ರಿ ಮಹಿಳಾ ಸಾಂತ್ವನ‌ ಕೇಂದ್ರದಲ್ಲಿ ಉಳಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಇಬ್ಬರನ್ನೂ ಠಾಣೆ...