Bengaluru, ಏಪ್ರಿಲ್ 22 -- ಬೆಂಗಳೂರು: ಕರ್ನಾಟಕದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಓಂ ಪ್ರಕಾಶ್‌ ಹತ್ಯೆ ಕೇಸ್‌ನಲ್ಲಿ ಅವರ ಪತ್ನಿ ಪಲ್ಲವಿ (64) ಭಾಗಿಯಾಗಿರುವುದು ಮೇಲ್ನೋಟಕ್ಕೆ ದೃಢಪಟ್ಟ ಕಾರಣ ಹಾಗೂ ಅವರ ಪುತ್ರ ಕಾರ್ತಿಕೇಶ್‌ ನೀಡಿದ ದೂರು ಆಧರಿಸಿ ಎಚ್‌.ಎಸ್‌.ಆರ್‌ ಲೇಔಟ್‌ ಠಾಣೆಯ ಪೊಲೀಸರು ಸೋಮವಾರ (ಏಪ್ರಿಲ್ 21) ರಾತ್ರಿ ಬಂಧಿಸಿದರು. ಆರೋಪಿ ಪಲ್ಲವಿ ಅವರನ್ನು 39ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಸೋಮವಾರ ತಡರಾತ್ರಿಯೇ ಹಾಜರುಪಡಿಸಿದ್ದು, ಮೇ 3ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪಲ್ಲವಿಯನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ಓಂ ಪ್ರಕಾಶ್ ಪುತ್ರಿ ಕೃತಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದ್ದು, ಅವರಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ನಡುವೆ, ಪಲ್ಲವಿ ಅವರು ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಹಾಕಿದ್ದ ಸಂದೇಶ ವೈರಲ್ ಆಗಿತ್ತು.

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆಗೂ ಕೆಲವು ದಿನಗಳ ಮೊದ...