ಭಾರತ, ಮಾರ್ಚ್ 19 -- ಮಾಲ್ಡೀವ್ಸ್ ವಿರುದ್ಧದ ಸ್ನೇಹಪರ ಪಂದ್ಯದಲ್ಲಿ ಭಾರತ ಫುಟ್ಬಾಲ್‌ ತಂಡವು ಭರ್ಜರಿ ಜಯ ಸಾಧಿಸಿದೆ. ಮೇಘಾಲಯದ ಶಿಲ್ಲಾಂಗ್‌ನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ (ಮಾ 19) ನಡೆದ ಸೌಹಾರ್ದ ಪಂದ್ಯದಲ್ಲಿ ಮಾಲ್ಡೀವ್ಸ್ ತಂಡವನ್ನು ಭಾರತ 3-0 ಗೋಲುಗಳಿಂದ ಸೋಲಿಸಿತು. ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ್ದ ಭಾರತ ಫುಟ್ಬಾಲ್‌ ರಂಗದ ದಿಗ್ಗಜ ಸುನಿಲ್ ಛೆಟ್ರಿ, ಅಂತಾರಾಷ್ಟ್ರೀಯ ಪುನರಾಗಮನ ಪಂದ್ಯದಲ್ಲಿ ಆಕರ್ಷಕ ಗೋಲು ಗಳಿಸಿ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದರು. ತಮ್ಮ ವೃತ್ತಿಜೀವನದ 95ನೇ ಗೋಲು ಗಳಿಸಿದ ಛೆಟ್ರಿ, ಭಾವುಕರಾದರು.

ಪಂದ್ಯವು ಸಂಪೂರ್ಣ ಏಕಮುಖವಾಗಿ ಸಾಗಿತು. ರಾಹುಲ್ ಭೇಕೆ 35ನೇ ನಿಮಿಷದಲ್ಲಿ ಅದ್ಭುತ ಹೆಡರ್ ಮೂಲಕ ಭಾರತದ ಪರ ಮೊದಲ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 66ನೇ ನಿಮಿಷದಲ್ಲಿ ಲಿಸ್ಟನ್ ಕೊಲಾಕೊ ಅವರ ಮತ್ತೊಂದು ಪ್ರಭಾವಶಾಲಿ ಹೆಡರ್, ತಂಡದ ಅಂಕವನ್ನು ಎರಡಕ್ಕೆ ಏರಿಸಿತು. ನಂತರ 76ನೇ ನಿಮಿಷದಲ್ಲಿ ಭಾರತದ ನಾಯಕ ಸುನಿಲ್ ಛೆಟ್ರ...