ಭಾರತ, ಏಪ್ರಿಲ್ 1 -- ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯಾವಾಗ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಏಪ್ರಿಲ್ 2ರಂದು ಗುಜರಾತ್ ಟೈಟಾನ್ಸ್-ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿರಾಟ್, ತನ್ನ ನಿವೃತ್ತಿಯ ದಿನಾಂಕ ಖಚಿತಪಡಿಸಿದ್ದಾರೆ. ತನ್ನ ಭವಿಷ್ಯದ ಯೋಜನೆಗಳನ್ನು ಸ್ಪಷ್ಟಪಡಿಸಿರುವ ವಿರಾಟ್ ಕೊಹ್ಲಿ, 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯದಾಗಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 16 ವರ್ಷಗಳ (2027) ನಂತರ ಏಕದಿನ ವಿಶ್ವಕಪ್ ಗೆದ್ದುಕೊಡಲು ಕಾತರರಾಗಿದ್ದಾರೆ.

ಮಾರ್ಚ್​ 9ರಂದು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಜಯಿಸಿದ ನಂತರ ಬಲಗೈ ಬ್ಯಾಟರ್​ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಅದಾಗ್ಯೂ ಕೊಹ್ಲಿ ಶೀಘ್ರವೇ ನಿವೃತ್ತಿಯ ಯೋಜನೆ ಇಲ್ಲ ಎಂದು ದೃಢಪಡಿಸಿದರು. ಆದರೀಗ ತಮ್ಮ ಬೂಟ...