ಭಾರತ, ಮಾರ್ಚ್ 6 -- ಭಾರತದ ಟೇಬಲ್ ಟೆನಿಸ್ ದಿಗ್ಗಜ ಅಚಂತ ಶರತ್ ಕಮಲ್ (Sharath Kamal) ಅವರು ಸುಮಾರು 20 ವರ್ಷಗಳ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಾರ್ಚ್ 5ರಂದು ಈ ನಿರ್ಧಾರ ಪ್ರಕಟಿಸಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ಜರುಗಲಿರುವ ಡಬ್ಲ್ಯುಟಿಟಿ ಸ್ಪರ್ಧೆಯುವ ಅವರ ಪಾಲಿಗೆ ಕೊನೆಯ ಪಂದ್ಯಾವಳಿಯಾಗಲಿದೆ. ಮಾರ್ಚ್​ 25 ರಿಂದ 30ರವರೆಗೆ ಡಬ್ಲ್ಯುಟಿಟಿ (ವಿಶ್ವ ಟೇಬಲ್ ಟೆನಿಸ್) ಸ್ಪರ್ಧೆ ನಡೆಯಲಿದೆ.

ಈ ಬಗ್ಗೆ ಮಾತನಾಡಿರುವ ಅವರು, 'ನಾನು ನನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಚೆನ್ನೈನಲ್ಲಿ ಆಡಿದ್ದೇನೆ. ಈಗ ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನೂ ಚೆನ್ನೈನಲ್ಲೇ ಆಡಲಿದ್ದೇನೆ. ವೃತ್ತಿಪರ ಕ್ರೀಡಾಪಟುವಾಗಿ ಇದು ನನ್ನ ಕೊನೆಯ ಟೂರ್ನಿಯಾಗಲಿದೆ' ಎಂದು 42 ವರ್ಷದ ಆಟಗಾರ ಹೇಳಿದ್ದಾರೆ.

ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ 7 ಚಿನ್ನದ ಪದಕ ಗೆದ್ದಿರುವ ಶರತ್ ಅವರು, 3 ಬೆಳ್ಳಿ, 3 ಕಂಚು ಗೆದ್ದಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ 2 ಕಂಚಿನ ಪದಕಗಳಿಗೂ ಕೊರಳೊಡ್ಡಿದ್ದಾರೆ. ಏಷ್ಯನ್ ಚಾಂಪಿಯನ್​ಶಿ...