ಭಾರತ, ಏಪ್ರಿಲ್ 18 -- ʻಶ್ರಾವಣಿ ಸುಬ್ರಮಣ್ಯʼ ಧಾರಾವಾಹಿ ಜೀ ಕನ್ನಡದ ಟಾಪ್‌ ಧಾರಾವಾಹಿಯಲ್ಲಿ ಗಟ್ಟಿಯಾಗಿ ನಿಂತಿದೆ. ಟಿಆರ್‌ಪಿಯಲ್ಲಿ ಮುಂದಡಿ ಇರಿಸಿರುವ ಈ ಸೀರಿಯಲ್‌ಗೆ ಕರುನಾಡ ವೀಕ್ಷಕ ಫಿದಾ ಆಗಿದ್ದಾನೆ. ಇದೇ ಸೀರಿಯಲ್‌ನ ನಾಯಕಿ ಶ್ರಾವಣಿ ಅಲಿಯಾಸ್‌ ಆಸಿಯಾ ಫಿರ್ದೋಸ್‌, ಬಣ್ಣದ ಲೋಕದಲ್ಲಿನ ಕಾಸ್ಟಿಂಗ್‌ ಕೌಚ್‌ ಕರಾಳತೆಯ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಈ ಕಾಸ್ಟಿಂಗ್‌ ಕೌಚ್‌ ವಿಚಾರದ ಬಗ್ಗೆ ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆಸಿಯಾ ಫಿರ್ದೋಸ್‌ ಮೊದಲ ಸಲ ಮಾತನಾಡಿದ್ದಾರೆ. ಅವರ ಮಾತಿನ ಧಾಟಿಯಲ್ಲಿಯೇ ಆ ಅನುಭವವನ್ನು ಮುಂದೆ ಓದಿ.

ಸೀರಿಯಲ್‌ ಜತೆಗೆ ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಹೀಗಿರುವಾಗಲೇ ನಿರ್ಮಾಪಕರೊಬ್ಬರು ಕರೆ ಮಾಡಿ, ಹೀಗೊಂದು ಸಿನಿಮಾ ಇದೆ ಎಂದು ಹೇಳಿದ್ದರು. ನಾನೂ ಕುತೂಹಲದಲ್ಲಿಯೇ ಹೋಗಿದ್ದೆ. ಆ ನಿರ್ಮಾಪಕರ ಆಫೀಸ್‌ ನಮ್ಮ ಮನೆ ಬಳಿಯೇ ಇದ್ದಿದ್ದರಿಂದ, ನಾನೊಬ್ಬಳೇ ಹೋಗಿದ್ದೆ.

ಅದಾದ ಮೇಲೆ ಸಿನಿಮಾ ಮಾತುಕತೆ ಶುರುವಾಯ್ತು. ಸಿನಿಮಾದ ಕಥೆಯನ್ನೂ ಹೇಳಿದರು. ನಿ...