Bengaluru, ಫೆಬ್ರವರಿ 3 -- Karthik Mahesh: ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಿರ್ದೇಶನದ ಮೂಲಕವೇ ಗಮನ ಸೆಳೆದ ನಿರ್ದೇಶಕರ ಸಾಲಿನಲ್ಲಿ ನಿಲ್ಲುವವರು ಸಿಂಪಲ್‌ ಸುನಿ. ಯುವಪೀಳಿಗೆಯನ್ನೇ ಗಮನದಲ್ಲಿಟ್ಟುಕೊಂಡು, ನವಿರಾದ ಹಾಸ್ಯದ ಮೂಲಕ ಕಥೆ ಹೇಳುವ ಸುನಿ ಅವರ ಶೈಲಿಗೆ ಅಭಿಮಾನಿಗಳಿದ್ದಾರೆ. ಈಗ ಇದೇ ಸಿಂಪಲ್‌ ಸುನಿ, ಹೊಸ ಕಥೆಯ ಜತೆಗೆ ಆಗಮಿಸಿದ್ದಾರೆ. ಈ ಸಲ ಅವರಿಗೆ ನಾಯಕನಾಗಿ ಸಾಥ್‌ ನೀಡುತ್ತಿರುವುದು ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌. ಈ ಜೋಡಿಯ ಚಿತ್ರಕ್ಕೀಗ ರಿಚಿ ರಿಚ್‌ ಶೀರ್ಷಿಕೆ ಇಡಲಾಗಿದೆ.

ಬಿಗ್‌ ಬಾಸ್‌ ವಿಜೇತರಾಗಿ ಹೊರಬಂದ ಬಳಿಕ ಕಾರ್ತಿಕ್‌ ಮಹೇಶ್‌, ರಾಮರಸ ಸಿನಿಮಾದಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಅದನ್ನು ಬಿಟ್ಟು ಅವರ ಬತ್ತಳಿಕೆಯಲ್ಲಿ ಬೇರೆ ಸಿನಿಮಾಗಳಿಲ್ಲ ಎಂಬುದಕ್ಕಿಂತ ಅಧಿಕೃತವಾಗಿ ಘೋಷಣೆ ಆಗಿರಲಿಲ್ಲ. ಈಗ ರಿಚಿ ರಿಚ್‌ ಚಿತ್ರದ ಮೂಲಕ ಸಿಂಪಲ್‌ ಸುನಿ ಜತೆಗೆ ಕಾರ್ತಿಕ್‌ ಕೈ ಜೋಡಿಸಿದ್ದಾರೆ. ರಿಚ್‌ ಆಗುವ ಕನಸನ್ನು ಇಬ್ಬರೂ ಈ ಸಿನಿಮಾ ಮೂಲಕ ನನಸು ಮಾಡಿಕೊಳ...