Bengaluru, ಏಪ್ರಿಲ್ 27 -- ಅರ್ಥ: ಈ ಅಭ್ಯಾಸವು ನಿನಗೆ ಸಾಧ್ಯವಾಗದೆ ಹೋದರೆ ಜ್ಞಾನಸಾಧನೆಯಲ್ಲಿ ತೊಡಗು. ಆದರೆ ಜ್ಞಾನಕ್ಕಿಂತ ಧ್ಯಾನವು ಉತ್ತಮ, ಧ್ಯಾನಕ್ಕಿಂತ ಕರ್ಮಫಲತ್ಯಾಗವು ಉತ್ತಮ. ಏಕೆಂದರೆ ಇಂತಹ ತ್ಯಾಗದಿಂದ ಮನಶ್ಯಾಂತಿಯನ್ನು ಪಡೆಯಬಹುದು.

ಭಾವಾರ್ಥ: ಹಿಂದಿನ ಶ್ಲೋಕಗಳಲ್ಲಿ ಹೇಳಿದಂತೆ ಭಕ್ತಿಸೇವೆಯಲ್ಲಿ ಎರಡು ವಿಧ. ನಿಯಂತ್ರಕ ತತ್ವಗಳ ರೀತಿ ಒಂದು. ಭಗವತ್ಪ್ರೇಮದಲ್ಲಿ ಪೂರ್ಣ ಆಸಕ್ತಿಯ ಮಾರ್ಗ ಮತ್ತೊಂದು. ಕೃಷ್ಣಪ್ರಜ್ಞೆಯ ತತ್ವಗಳನ್ನು ಅನುಸರಿಸಲು ಸಾಧ್ಯವಾಗದೆ ಹೋದವರು ಜ್ಞಾನವನ್ನು ಬೆಳೆಸಿಕೊಳ್ಳುವುದು ಉತ್ತಮ. ಏಕೆಂದರೆ ಜ್ಞಾನದಿಂದ ಮನುಷ್ಯನು ತನ್ನ ನಿಜವಾದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲ. ಕ್ರಮೇಣ ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮನುಷ್ಯನು ತಾನೇ ಪರಮನು ಎಂಬ ಅರಿವನ್ನು ತಂದುಕೊಡುವ ಪ್ರಕ್ರಿಯೆಗಳಿವೆ. ಭಕ್ತಿಸೇವೆಯಲ್ಲಿ ನಿರತನಾಗಲು ಸಾಧ್ಯವಾಗದೇ ಹೋದವನಿಗೆ ಇಂತಹ ಧ್ಯಾನವೇ ಉತ್ತಮ. ಈ ರೀತಿ ಧ್ಯಾನಮಾಡಲಾರದವನಿಗೆ, ವೇದಸಾಹಿತ್ಯದಲ್ಲಿ ಬ್ರಾಹ್ಮಣರು, ಕ್ಷತ್ರಿಯರು,...