ಭಾರತ, ಏಪ್ರಿಲ್ 13 -- Hanuman Jayanthi 2025 Special: ಹಿಂದೂ ಧರ್ಮದಲ್ಲಿ ಎಲ್ಲ ದೇವರು, ದೇವತೆಗಳಿಗೂ ಪೂಜ್ಯನೀಯ ಸ್ಥಾನ ನೀಡಿ ಗೌರವಿಸಲಾಗುತ್ತದೆ. ಕೋಟಿ ದೇವತೆಗಳು ಹಿಂದೂ ಧರ್ಮದಲ್ಲಿದ್ದರೂ ಹೆಚ್ಚು ಪ್ರಾಮುಖ್ಯ ಪಡೆಯುವವನು, ಹೆಚ್ಚು ಭಕ್ತರನ್ನು ಹೊಂದಿದವನು ವಾಯುಪುತ್ರ ಆಂಜನೇಯ. ಹನುಮ ದೇವರು ಅಷ್ಟಸಿದ್ಧಿಗಳ ಒಡೆಯ. ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರ-ತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷ ಸಾಮರ್ಥ್ಯ. ಇದನ್ನು ಪ್ರಮುಖವಾಗಿ ಎಂಟು ಸಿದ್ಧಿಗಳೆಂದು ಪರಿಗಣಿಸಿದ್ದಾರೆ.

ಇವುಗಳನ್ನೆಲ್ಲ ಜಯಿಸಿದ ಹನುಮನಿಗೆ ಎಳ್ಳಷ್ಟೂ ಅಹಂಕಾರ ಇರಲಿಲ್ಲ.

ಪುರಾಣ ಕಥೆಗಳಲ್ಲಿ ಹನುಮಂತನು ದೇವರ ಅವತಾರ ಹಾಗೂ ಪವಾಡದ ವ್ಯಕ್ತಿತ್ವವುಳ್ಳವನಾದರೂ, ಹನುಮಂತನ ಜೀವನವನ್ನು ಗಮನಿಸಿದಾಗ ಕಂಡುಬರುವ ಅಂಶವೆಂದರೆ ಆಂಜನೇಯನ ವ...