ಭಾರತ, ಫೆಬ್ರವರಿ 27 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಪಾಕಿಸ್ತಾನ-ಬಾಂಗ್ಲಾದೇಶ ನಡುವಿನ ಪಂದ್ಯ ನಿರಂತರ ಮಳೆಯಿಂದ ರದ್ದಾಗಿದೆ. ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಈ ಪಂದ್ಯ ಮಳೆ ಕಾರಣ ಟಾಸ್ ಪ್ರಕ್ರಿಯೆ ನಡೆಯದೆಯೇ ಕೊನೆಗೊಂಡಿದೆ. ಇದರೊಂದಿಗೆ ಹಾಲಿ ಚಾಂಪಿಯನ್ ಪಾಕಿಸ್ತಾನ, 1996ರ ನಂತರ ಅಂದರೆ 29 ವರ್ಷಗಳ ಬಳಿಕ ಐಸಿಸಿ ಪಂದ್ಯಾವಳಿಗೆ ಆತಿಥ್ಯ ವಹಿಸಿ ಗೆಲುವೇ ಕಾಣದೇ ಟೂರ್ನಿಯಿಂದ ಹೊರಬಿದ್ದಿದೆ. ಇತ್ತ ಎದುರಾಳಿಯಾಗಿದ್ದ ಬಾಂಗ್ಲಾ ಕೂಡ ಗೆಲುವಿಲ್ಲದೆ ಅಭಿಯಾನ ಮುಗಿಸಿದೆ. ಈ ಎರಡೂ ತಂಡಗಳು ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿದ್ದವು. ಹೀಗಾಗಿ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿದ್ದವು. ಕೊನೆಯ ಪಂದ್ಯದಲ್ಲಿ ಗೆದ್ದು ಮರ್ಯಾದೆ ಕಾಪಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ತಂಡಗಳ ಕನಸಿಗೆ ಮಳೆಯು ತಣ್ಣೀರು ಎರಚಿದೆ.

ಬಾಂಗ್ಲಾದೇಶ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಪಾಕಿಸ್ತಾನ ಗೆಲ್ಲುತ್ತದೆ ಎಂಬ ಲೆಕ್ಕಾಚಾರದಲ್ಲಿ ಅವರ ಅಭಿಮಾನಿಗಳಿದ್ದರು. ಆದರೆ ಇದು ತೀವ್ರ ...