Koppal, ಜುಲೈ 18 -- ಕೊಪ್ಪಳ: ಹತ್ತಿ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳಾದ ಮಿರಿಡ್ ತಿಗಣೆ, ಥ್ರೀಪ್ಸ್, ಹಿಟ್ಟು ತಿಗಣೆ, ಹಸಿರು ಜಿಗಿಹುಳು, ಬಿಳಿನೊಣ, ಗುಲಾಬಿ ಕಾಯಿಕೊರಕದ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ಕೃಷಿ ಇಲಾಖೆಯಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ. ಹತ್ತಿ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳ ಹತೋಟಿಗಾಗಿ ರೈತರು ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದು. ಹತ್ತಿ ಬೆಳೆಯ ಅವಧಿ ಮುಗಿದ ನಂತರ ಗಿಡಗಳನ್ನು ಟ್ಯಾಕ್ಟರ್ ಚಾಲಿತ ಕೇಡರ್ನಿಂದ ಕಿತ್ತು ಪುಡಿ ಮಾಡಿ ಸೇರಿಸುವುದು. ಬಾದೆಗೊಳಗಾದ ಕಾಯಿಗಳನ್ನು ಹತ್ತಿ ಗಿಡದಿಂದ ಕಿತ್ತು ನಾಶಪಡಿಸಬೇಕು. ಆಶ್ರಯ ಕಳೆಗಳಾದ ಅಬುಟಿಲಾನ್, ಪಾರ್ಥೆನಿಯಮ್, ವಿಭೂತಿ ಗಿಡ ಮತ್ತು ಇತರ ಕಳೆಗಳನ್ನು ಕಿತ್ತು ನಾಶಮಾಡುವುದು. ಹತ್ತಿ ಬೆಳೆಯ ಸುತ್ತಲು ನಾಲ್ಕು ಸಾಲು ಸಜ್ಜೆ ಬೆಳೆಯುವುದರಿಂದ ಸ್ವಲ್ಪ ಮಟ್ಟಿಗಾದರು ಡ್ರಿಪ್ಸ್ ನುಸಿ ಮತ್ತು ಹಿಟ್ಟು ತಿಗಣೆ ಕೀಟಗಳ ಬಾಧೆಯನ್ನು ನಿಯಂತ್ರಿಸಬಹುದು. ಆಯಾ ಪ್ರದೇಶಕ್ಕೆ ಶಿಫಾರಸ್ಸು ಮಾಡಿದ ಬಿಟಿ ಹತ್ತಿಯ ಶಕ್ತಿಮಾನ್ ತಳಿಗಳನ್ನು ಅ...