ಭಾರತ, ಮಾರ್ಚ್ 1 -- ಹಲ್ಲುಗಳು ಹುಳುಕಾಗಲು ಬರೀ ಸಿಹಿ ತಿಂಡಿ ಮಾತ್ರವೇ ಕಾರಣವಲ್ಲ. ಅನುವಂಶಿಕ ಮತ್ತು ವಂಶ ಪಾರಂಪರ್ಯ ಕಾರಣಗಳು, ನಿಯಮಿತವಾಗಿ ಹಲ್ಲಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳದಿರುವುದು, ಸರಿಯಾದ ಕ್ರಮದಲ್ಲಿ ಸರಿಯಾದ ದಂತ ಚೂರ್ಣವನ್ನು (ಟೂತ್‌ ಪೌಡರ್ ಅಥವಾ ಪೇಸ್ಟ್) ಉಪಯೋಗಿಸಿ ಹಲ್ಲು ಉಜ್ಜದಿರುವುದರಿಂದ ದಂತ ಕ್ಷಯವಾಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಹಲ್ಲಿನ ರಚನೆಯಲ್ಲಿನ ವ್ಯತ್ಯಾಸ, ತುಂಬಾ ಆಳವಾದ ಹಲ್ಲಿನ ಚಡಿ ಮತ್ತು ಗೀರುಗಳು, ಹಲ್ಲಿನ ಜೋಡಣೆಯಲ್ಲಿನ ವ್ಯತ್ಯಾಸ, ವಕ್ರದಂತತೆ ಇತ್ಯಾದಿಗಳಿಂದಾಗಿ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲಾಗದ ವಾತಾವರಣ ಇರಬಹುದು. ಮೃದುವಾದ ಜಿಗುಟಾದ ಸಿಹಿ ಪದಾರ್ಥಗಳ ಅತಿಯಾದ ಬಳಕೆ, ಹಲ್ಲಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ, ಮೂಢನಂಬಿಕೆ, ಅನಕ್ಷರತೆ ಮತ್ತು ಮೂಲಸೌಕರ್ಯದ ಕೊರತೆ ಮುಂತಾದವುಗಳಿಂದಲೂ ದಂತ ಕ್ಷಯ ಬರುವ ಸಾಧ್ಯತೆ ಇರುತ್ತದೆ.

ಅದೇ ರೀತಿ ಬುದ್ಧಿಮಾಂದ್ಯತೆ, ವಿಕಲ ಚೇತನ, ಅನಾರೋಗ್ಯದ ಕಾರಣದಿಂದಲೂ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲಾಗದ ಸನ್ನಿವೇಶ ...