Bangalore, ಜನವರಿ 27 -- ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಮಗೆ ರಾಜಕಾರಣಿಗಳ ಕಾಟ ಅಷ್ಟೊಂದಿಲ್ಲ. ಆದರೆ ಮಂಗಗಳ ಉಪಟಳವನ್ನು ಸಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಂಗಗಳ ನಿಯಂತ್ರಣಕ್ಕೆ ಪಾರ್ಕ್‌ ಮಾಡುತ್ತೇವೆ ಎಂದು ರಾಜಕಾರಣಿಗಳು ಅಲ್ಲಿಯ ರೈತರಿಗೆ ಮಂಗನ ಟೋಪಿ ಹಾಕಿ ಮಾಯವಾಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನು ಕೆಲವು ವರ್ಷಗಳಲ್ಲಿ ಮಂಗಗಳು ಮನುಷ್ಯರ ಮೇಲೆ ದಾಳಿ ನಡೆಸಿ ರಾಜಕಾರಣಿಗಳ ರೀತಿಯಲ್ಲೇ ಲೂಟಿ ಮಾಡುವುದರಲ್ಲಿ ಸಂಶಯವಿಲ್ಲ.

ಒಂದು ದಶಕಗಳ ಹಿಂದೆ ನಡೆದಿದ್ದ ನನ್ನ ಮದುವೆಗೆ ಸುಮಾರು ಒಂದೂವರೆ ಸಾವಿರ ಜನರಾಗಿದ್ದರು. ನಾವು ಪೇಟೆಯಿಂದ ತರಕಾರಿ ತರದೇ, ನಮ್ಮ ತೋಟ, ಕಾಡಿನಲ್ಲಿ ಸಿಗುವ ತರಕಾರಿ, ಸೊಪ್ಪು, ಕಾಯಿಯನ್ನು ತಂದು ಅಡುಗೆ ಮಾಡಿಸಿದ್ದೆವು. ಹಲಸು, ಮಾವು, ಬಾಳೆಯ ಜತೆಗೆ ಇತರ ಸೊಪ್ಪುಗಳು ನಮ್ಮ ಅಡುಗೆ ಮನೆಯಲ್ಲಿ ತುಂಬಿದ್ದವು. ಆದರೆ ಒಂದು ದಶಕ ಕಳೆಯುವುದರೊಳಗೆ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಲೆನಾಡಿನ ಬಹುತೇಕರ ಮನೆಯಲ್ಲಿ ಸಣ್ಣ ಹಬ್ಬ-ಹರಿದಿನದ ಪ್ರಸಾದ, ...