Bengaluru, ಫೆಬ್ರವರಿ 2 -- ಸದಾ ಯೌವನದಲ್ಲಿರುವಂತೆ ಕಾಣುವುದು ಮತ್ತು ಎಲ್ಲರಿಂದಲೂ ಪ್ರಶಂಸೆ ಗಳಿಸುವುದು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ನೀವು ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದರೆ ಸಾಕು, ಅವರ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತದೆ. ಇನ್ನು ಕೆಲವರಂತೂ ವಯಸ್ಸಾಗುತ್ತಿದೆ ಎನ್ನುವುದನ್ನು ಮರೆಮಾಚಲು ದುಬಾರಿ ಸೌಂದರ್ಯ ವರ್ಧಕ ಉತ್ಪನ್ನಗಳು ಮತ್ತು ಕಾಸ್ಮೆಟಿಕ್ ಚಿಕಿತ್ಸೆಯ ಮೊರೆಹೋಗುತ್ತಾರೆ. ಆದರೆ ಅಷ್ಟೆಲ್ಲಾ ಮಾಡುವ ಬದಲು, ನೀವೇಕೆ ಸರಳ ತರಕಾರಿ ಡಯೆಟ್ ಸೂತ್ರ ಪಾಲಿಸಬಾರದು? ಆರ್ಥೋಸರ್ಜನ್ ಡಾ. ಮನು ಬೋರಾ ಅವರು ಹೇಳುವಂತೆ, ನಾವು ಸೇವಿಸುವ ಆಹಾರ ಮತ್ತು ಜೀವನಶೈಲಿಯ ಪ್ರಭಾವ ನಮ್ಮ ವಯಸ್ಸಾಗುವಿಕೆ ಮತ್ತು ಬಾಹ್ಯ ಸೌಂದರ್ಯದ ಮೇಲೆ ಉಂಟಾಗುತ್ತದೆ. ಆದರೆ ವಯಸ್ಸಾಗಿದೆ ಎನ್ನುವುದನ್ನು ಮರೆಮಾಚಲು ಮತ್ತು 10 ವರ್ಷ ಚಿಕ್ಕವರಾಗಿ ಕಾಣಿಸಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಡಾ. ಮನು ಬೋರಾ ಅವರ ಪ್ರಕಾರ, ವಯಸ್ಸಾದಂತೆ ಕಾಣಿಸುವುದನ್ನು ತಡೆಯಲು ಮಾಂಸಾಹಾರ ಸೇವನೆಗಿಂತ ತರಕಾ...