Bengaluru, ಮೇ 16 -- ಜ್ಯೋತಿಷಿಗಳ ಪ್ರಕಾರ ಜಾತಕದಲ್ಲಿ ಗುರು ಬಲವಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಎಲ್ಲಾ ರೀತಿಯ ಲೌಕಿಕ ಸುಖಗಳನ್ನು ಪಡೆಯುತ್ತಾನೆ. ಇದರೊಂದಿಗೆ ಜೀವನದಲ್ಲಿ ನೀವು ಎದುರಿಸುವ ಆರ್ಥಿಕ ಬಿಕ್ಕಟ್ಟು ಕೂಡಾ ದೂರವಾಗುತ್ತದೆ. ಆದ್ದರಿಂದ ಗುರುವಾರ ಭಕ್ತರು ಮಡಿಯುಟ್ಟು, ಭಕ್ತಿಯಿಂದ ಬೃಹಸ್ಪತಿಯನ್ನು ಧ್ಯಾನಿಸಬೇಕು. ಜೊತೆಗೆ ವಿಷ್ಣು ಹಾಗೂ ಲಕ್ಷ್ಮಿಯನ್ನು ಪೂಜಿಸಬೇಕು.

ಗುರುವಾರ ವಿಷ್ಣುವಿಗೆ ಬಹಳ ಪ್ರಿಯ. ಈ ದಿನದಂದು ಭಗವಾನ್ ವಿಷ್ಣು ಮತ್ತು ದೇವಗುರು ಬೃಹಸ್ಪತಿಯನ್ನು ವಿಧಿವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ಅಲ್ಲದೆ, ಗುರುವಾರ ಉಪವಾಸ ಮಾಡಲಾಗುತ್ತದೆ. ಗುರುವಾರ ಉಪವಾಸ ಮಾಡುವುದರಿಂದ ಗುರುವು ಜಾತಕದಲ್ಲಿ ಬಲಶಾಲಿಯಾಗುತ್ತಾನೆ. ಅದರಲ್ಲೂ ಅವಿತಾಹಿತ ಹೆಣ್ಣು ಮಕ್ಕಳು ತಮಗೆ ಆದಷ್ಟು ಬೇಗ ಗುರು ಬಲ ಒಲಿದು ಕಂಕಣ ಭಾಗ್ಯ ಕೈಗೂಡಿ ಬರಲಿ ಎಂದು ಪ್ರಾರ್ಥಿಸಿದರೆ ವಿವಾಹಿತ ಮಹಿಳೆಯರು ತಮ್ಮ ಪತಿಯ ಧೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

ಜ್ಯೋತಿಷಿಗಳ ಪ್ರಕಾರ, ಜಾತಕದಲ್ಲಿ ಗುರುವು ಬಲವಾಗಿದ್ದರೆ, ವ್ಯಕ...