ಭಾರತ, ಏಪ್ರಿಲ್ 16 -- ಮೈಸೂರು: ಇನ್ನೇನು ಈ ವರ್ಷದ ಅಂತರಾಷ್ಟ್ರೀಯ ಪರಂಪರೆ ಬಂದೇ ಬಿಟ್ಟಿತು. 2025ರ ಏಪ್ರಿಲ್ 18ರಂದು ಅಂತರರಾಷ್ಟ್ರೀಯ ಪರಂಪರೆ ದಿನವನ್ನು ಆಚರಿಸಲಾಗುತ್ತಿದ್ದು. ಇದರ ಭಾಗವಾಗಿ ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಮಕ್ಕಳು ಹಾಗೂ ಯುವಕರಿಗೆ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಮೈಸೂರು ರೈಲು ಮ್ಯೂಸಿಯಂ ಮ್ಯೂಸಿಯಂ ಆವರಣದಲ್ಲಿ ನಡೆಯುವ ಪಾರಂಪರಿಕ ದಿನದ ಭಾಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ರೂಪಿಸಲಾಗಿದೆ. ಈ ವರ್ಷದ ವಿಷಯ "ವಿಪತ್ತು ಮತ್ತು ಸಂಘರ್ಷಕ್ಕೆ ತಡೆಗಟ್ಟುವ ಪರಂಪರೆ" ಎಂಬುದು. ಪ್ರಕೃತಿವಿಪತ್ತುಗಳು ಮತ್ತು ಸಶಸ್ತ್ರ ಸಂಘರ್ಷಗಳಿಂದ ಅಪಾಯದಲ್ಲಿರುವ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಅಗತ್ಯವಿರುವ ಸಿದ್ಧತೆ ಮತ್ತು ಕ್ರಮಗಳ ಮೇಲೆ ಗಮನಹರಿಸುತ್ತಿದ್ದು., ಇದರ ಮೇಲೆಯೇ ಚಿತ್ರ ಬರೆಯಲು ಸೂಚಿಸಲಾಗಿದೆ.

ಈ ವಿಶೇಷ ದಿನದ ಅಂಗವಾಗಿ, ಪೋಸ್ಟರ್-ಮೇಕಿಂಗ್ ಮತ್ತು ಚಿತ್ರಕಲೆ/ಚಿತ್ರ ಸ್ಪರ್ಧೆ( ಮಾಧ್ಯಮ: ವಾಟರ್‌ಕಲರ್, ಕ್ರೇಯಾನ್ಸ್, ಪೆನ್ಸಿಲ್ ಇತ್ಯಾದಿ. ಕಾಗದದ ಗಾತ್ರ: A3 (297mm ...