Bangalore, ಫೆಬ್ರವರಿ 16 -- ನಿಮಗೆ ನಾಟಕ ಅನುದಾನದಲ್ಲಿ ಆಸಕ್ತಿಯಿದೆಯೇ, ಮರಾಠಿಯಿಂದ ಕನ್ನಡಕ್ಕೆ ನಾಟಕಗಳನ್ನು ಅನುವಾದಿಸಬಲ್ಲ ಸಾಮರ್ಥ್ಯವಿದೆಯೇ. ಹಾಗಿದ್ದರೆ ನಿಮಗೆ ಒಂದು ವಿಭಿನ್ನ ಅವಕಾಶವಿದೆ.ಬಹುವಚನ​ ಪ್ರಕಾಶನ ಮತ್ತು ನಾಟಕ ಕಂಪನಿ ತಮಾಶಾ ಸ್ಟುಡಿಯೋ ಫೌಂಡೇಶನ್‌ನಿಂದ ಜಂಟಿಯಾಗಿ​ ಸ್ಥಾಪಿಸಲಾದ ನಾಟಕ ಅನುವಾದ ಫೆಲೋಶಿಪ್‌ಗೆ ಅನುವಾದಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾಷೆಗಳ ನಡುವೆ ಅನುದಾನದ ಕೊಂಡಿ ಗಟ್ಟಿಯಾಗಬೇಕು. ವಿಭಿನ್ನ ಭಾಷೆಗಳ ನಾಟಕಗಳು ರಂಗಾಸಕ್ತರನ್ನು ತಲುಪಬೇಕು ಎನ್ನುವ ಆಶಯದೊಂದಿಗೆ ಫೆಲೋಶಿಪ್‌ನಂತಹ ಚಟುವಟಿಕೆಗೆ ಒತ್ತು ನೀಡಲಾಗುತ್ತದೆ. ಇದು ಎರಡು ಭಾಷೆಗಳಲ್ಲಿನ ಬರಹಗಾರರು, ರಂಗಾಸಕ್ತರಿಗೆ ಉತ್ತೇನಜ ನೀಡಿದಂತಾಗುತ್ತದೆ.

ಇದಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯಿಯಿದ್ದು. ಬಂದಿರುವ ಅರ್ಜಿಗಳಿಂದ ಮೂರು ಅನುವಾದಕರಿಗೆ ಫೆಲೋಶಿಪ್ ನೀಡಲಾಗುವುದು. ಇಬ್ಬರು ಭಾಷಾಂತರಕಾರರು ​ಜೊತೆಗೂಡಿ ಭಾಷಾಂತರ ಮಾಡುವ ಉದ್ದೇಶ ಹೊಂದಿದ್ದರೆ, ಅಂಥ ಅರ್ಜಿಗಳನ್ನು ಸಹ ಸ್ವೀಕರಿಸಲಾಗುವುದು. ಫೆಲೋಶಿಪ್ 15 ದಿನಗಳ ವಾ...