Nippani, ಏಪ್ರಿಲ್ 6 -- ನಿಪ್ಪಾಣಿಯ ಜೊಲ್ಲೆ ಸಮೂಹದ ಕೃಷಿ ಉತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿರುವುದು ವಿಶ್ವದ ಅತಿ ಕುಳ್ಳ ಎಮ್ಮೆ ರಾಧಾ. 2 ವರ್ಷದ 9 ತಿಂಗಳಿನ ಈ ಎಮ್ಮೆ ಇರುವುದು ಬರೀ ಮೂರು ಅಡಿ ಮಾತ್ರ. ಕುಳ್ಳ ಎಮ್ಮೆ ಭರ್ಜರಿ ಹಾಲು ನೀಡುತ್ತದೆ.

ಕುಳ್ಳ ಎಮ್ಮೆಯನ್ನು ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಳಕೆಮಾಡಲಾಗುತ್ತಿದೆ. ಕರ್ನಾಟಕದಲ್ಲೂ ಇದನ್ನು ಪರಿಚಯಿಸುವ ಕೆಲಸ ನಡೆದಿದೆ.

ಬರೋಬ್ಬರಿ ಒಂದೂವರ ಟನ್‌ ತೂಗುವ ಗಜೇಂದ್ರ ಎನ್ನುವ ಕೋಣ ಕೂಡ ನಿಪ್ಪಾಣಿಯ ಕೃಷಿ ಉತ್ಸವದಲ್ಲಿ ಕೃಷಿಕರನ್ನು ಸೆಳಯುತ್ತಿದೆ.

ವಿಶ್ವದಲ್ಲೇ ಅತೀ ಚಿಕ್ಕ ಆಕಳು ಎಂದು ಹೆಸರು ಪಡೆದಿರುವ ವಿಶಿಷ್ಟ ತಳಿಯನ್ನು ಕೂಡ ಕೃಷಿ ಪ್ರದರ್ಶನಕ್ಕೆ ತರಲಾಗಿದ್ದು, ಜನರನ್ನು ಆಕರ್ಷಿಸುತ್ತಿದೆ.

ಕೆಂಪು ಕಂದಾರಿ ಹಸು ಕೂಡ ಉತ್ತರ ಭಾರತದಲ್ಲಿ ವಿಶೇಷ ಆಕರ್ಷಣೆಯೇ. ಲಕ್ಷ್ಮಿ ಎನ್ನುವ ಹೆಸರಿನ ಕೆಂದಾರಿ ಹಸು ಕೂಡ ನಿಪ್ಪಾಣಿಯ ಕೃಷಿ ಪ್ರದರ್ಶನಕ್ಕೆ ಬಂದಿದೆ.

ಸಾಮಾನ್ಯವಾಗಿ ಹುಂಜಗಳೆಂದರೆ ಎರಡು ಮೂರು ಕೆಜಿ ಇರಬಹುದು ಎನ್ನುವುದು ನಮ್ಮ ಅಂದಾ...