ಭಾರತ, ಮಾರ್ಚ್ 12 -- ಸಾಮಾನ್ಯವಾಗಿ ಪ್ರತಿಯೊಂದು ಕುಂಡಲಿಯಲ್ಲಿಯೂ ನಿಪುಣ ಯೋಗ ಅಥವಾ ಬುಧಾದಿತ್ಯಯೋಗ ಇರುತ್ತದೆ. ರವಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿಪುಣ ಯೋಗವು ಉಂಟಾಗುತ್ತದೆ. ಇದನ್ನು ಬುದಾಧಿತ್ಯ ಯೋಗ ಎಂದು ಕೂಡ ಕರೆಯುತ್ತೇವೆ. ಆದರೆ ಈ ಯೋಗದಿಂದ ಪ್ರತಿಯೊಬ್ಬರಿಗೂ ಉತ್ತಮ ಫಲಗಳು ದೊರೆಯಲು ಸಾಧ್ಯವಾಗುವುದಿಲ್ಲ. ಯಾವುದೇ ಕುಂಡಲಿಯಲ್ಲಿ ರವಿ ಮತ್ತು ಬುಧ ಗ್ರಹಗಳು ಸಶಕ್ತರಾಗಿದ್ದಲ್ಲಿ ಈ ಯೋಗದ ಫಲವು ಸಂಪೂರ್ಣವಾಗಿ ದೊರೆಯುತ್ತದೆ. ಈ ಯೋಗದಿಂದ ಜಾತಕನು ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಗಳಿಸುತ್ತಾನೆ. ಉನ್ನತ ಪದವಿ ಮತ್ತು ಹಣಕಾಸಿನ ಅನುಕೂಲತೆ ದೊರೆಯುತ್ತದೆ. ರವಿ ಗ್ರಹದಿಂದ ಆತ್ಮವಿಶ್ವಾಸವು ಹೆಚ್ಚುತ್ತದೆ. ಉತ್ತಮ ಆರೋಗ್ಯವಿರುತ್ತದೆ. ಜೀವನದಲ್ಲಿನ ಅಡಚಣೆಗಳು ದೂರವಾಗುತ್ತವೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಉತ್ತಮ ಒಡನಾಟ ಇರುತ್ತದೆ. ಉತ್ತಮ ಬುದ್ಧಿಶಕ್ತಿ ದೊರೆಯುತ್ತದೆ. ಎಲ್ಲರೊಂದಿಗೆ ಹೊಂದಾಣಿಕೆಯ ಗುಣ ಧರ್ಮವು ಕಂಡು ಬರುತ್ತದೆ. ವಿದ್ಯಾಭ್ಯಾಸದಲ್ಲಿ ಯಾವುದೇ ರೀತಿಯ ಅಡಚಣೆಗಳು ಇರುವುದಿ...