ಭಾರತ, ಫೆಬ್ರವರಿ 13 -- ಜಗತ್ತಿನ ಹಲವು ನಗರಗಳಲ್ಲಿ ಜನದಟ್ಟಣೆಯೇ ದೊಡ್ಡ ಸಮಸ್ಯೆ. ನಿತ್ಯದ ಬದುಕೇ ಇಂತಹ ನಗರಗಳಲ್ಲಿ ದುಸ್ತರ. ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ನಗರದೊಳಗೆ ಸಂಚರಿಸುವುದೇ ದೊಡ್ಡ ಸವಾಲು. ಅಲ್ಲದೆ ಹೆಚ್ಚು ಖರ್ಚು ಬೇರೆ. ಕೆಲಸದ ಸ್ಥಳ ತಲುಪಲು ಜನರು ಸಾಮಾನ್ಯವಾಗಿ ಕಾರು, ಬೈಕ್, ಬಸ್‌, ಮೆಟ್ರೋ ಹೀಗೆ ಸಮೂಹ ಸಾರಿಗೆಗಳನ್ನು ಬಳಸುತ್ತಾರೆ. ಆ ಮೂಲಕ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವ ಪ್ರಯತ್ನ ಮಾಡುತ್ತಾರೆ. ನಿತ್ಯದ ಟ್ರಾಫಿಕ್‌ ಜಾಮ್‌ನಲ್ಲಿ ನುಸುಳಿಕೊಂಡು ಹೋಗಲು ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತದೆ. ಇದಕ್ಕೆಲ್ಲಾ ಮುಕ್ತಿ ಯಾವಾಗ ಎಂಬುದಾಗಿ ಹಲವರು ಯೋಚಿಸುತ್ತಾರೆ. ಆದರೆ ಇಲ್ಲೊಬ್ಬರು ಮಹಿಳೆ ಪ್ರತಿನಿತ್ಯ ಆಫೀಸ್‌ಗೆ ವಿಮಾನದಲ್ಲಿ ಹೋಗ್ತಾರಂತೆ.

ಭಾರತ ಮೂಲದ ಮಹಿಳೆಯೊಬ್ಬರು ಸದ್ಯ ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಇವರು ಪ್ರತಿನಿತ್ಯ ಆಫೀಸ್‌ ಕೆಲಸಕ್ಕೆ ಹೋಗಲು ಬರೋಬ್ಬರಿ 700 ಕಿ.ಮೀ ಪ್ರಯಾಣ ಮಾಡುತ್ತಾರೆ. ಇವರರಿಗೆ ವಿಮಾನ ನಿಲ್ದಾಣ, ಭದ್ರತಾ ತಪಾಸಣೆ ನಿತ್ಯದ ಸಂಗಾತಿ. ಅಂದ ಹಾಗೆ ಇವರ ಹೆಸರು ರ...