ಭಾರತ, ಮಾರ್ಚ್ 1 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಲಾಹೋರ್​ನ ಗಡಾಫಿ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ (Australia vs Afghanistan) ನಡುವಿನ ಪಂದ್ಯವು ಮಳೆಯಿಂದ (Rain) ರದ್ದಾಯಿತು. ಟೂರ್ನಿಯಲ್ಲಿ ಮಳೆಯಿಂದಾಗಿ ರದ್ದಾದ ಮೂರನೇ ಪಂದ್ಯ ಇದು. ಹೀಗಾಗಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಯಿತು. ಒಟ್ಟು 4 ಅಂಕ ಗಳಿಸಿದ ಆಸ್ಟ್ರೇಲಿಯಾ ತಂಡವು ಬಿ ಗುಂಪಿನಿಂದ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು. 3 ಅಂಕ ಪಡೆದ ಅಫ್ಘಾನಿಸ್ತಾನ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಆದರೆ ಗಣಿತ ಅಂಕಿ-ಅಂಶಗಳ ಪ್ರಕಾರ ಆಫ್ಘನ್ ಸೆಮೀಸ್ ಆಸೆ ಇನ್ನೂ ಜೀವಂತ! ನಿಜ ಹೇಳಬೇಕೆಂದರೆ ಇದು ಕಬ್ಭಿಣದ ಕಡಲೆ!

ಭಾರತ-ನ್ಯೂಜಿಲೆಂಡ್ ತಂಡಗಳ ನಂತರ ಸೆಮಿಫೈನಲ್ ಪ್ರವೇಶಿಸಿರುವ ಆಸೀಸ್, 274 ರನ್​ಗಳ ಗುರಿ ಬೆನ್ನಟ್ಟುವಾಗ ಅತ್ಯುತ್ತಮ ಪ್ರದರ್ಶನ ತೋರಿತ್ತು. ಸಾದಿಕುಲ್ಲಾ (85 ರನ್), ಅಜ್ಮತ್​ಉಲ್ಲಾ ಒಮರ್ಜಾಯ್ (67) ಅವರ ಬ್ಯಾಟಿಂಗ್ ಬಲದಿಂದ ಆಫ್ಘನ್ 50 ಓವರ್​ಗಳಲ್ಲಿ 273 ರನ್ ಗಳಿಸಿತ್ತು. ಇದಕ್ಕೆ ...