ಭಾರತ, ಮೇ 4 -- ನಿಂಬೆಹಣ್ಣು ಬಹುಪಯೋಗಿ, ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಆರೋಗ್ಯಕ್ಕೂ ನಿಂಬೆಹಣ್ಣು ಉತ್ತಮ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಬೇಸಿಗೆಯಲ್ಲಿ ನಿಂಬೆ ಪಾನಕ, ಜ್ಯೂಸ್ ಕುಡಿಯುವುದರಿಂದ ಆಯಾಸ ಕಡಿಮೆಯಾಗುತ್ತದೆ. ಕೆಲವೊಂದು ಆಹಾರ ಖಾದ್ಯಗಳಿಗೆ ಒಂದೆರಡು ಹನಿ ನಿಂಬೆರಸ ಹಾಕುವುದರಿಂದ ಅದರ ರುಚಿ ದುಪ್ಪಟ್ಟಾಗುತ್ತದೆ.

ಆದರೆ ನಿಂಬೆಹಣ್ಣನ್ನು ಎಲ್ಲಾ ಪದಾರ್ಥಗಳ ಜೊತೆ ಸೇವಿಸುವಂತಿಲ್ಲ. ಕೆಲವೊಂದು ಪದಾರ್ಥಗಳ ಜೊತೆ ನಿಂಬೆ ಸೇವಿಸುವುದರಿಂದ ದೇಹಕ್ಕೆ ಪ್ರಯೋಜನವಾಗುವುದಕ್ಕಿಂತ ಹಾನಿಯಾಗುವುದೇ ಹೆಚ್ಚು. ಇದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಎದುರಾಗಬಹುದು. ಹಾಗಾದರೆ ನಿಂಬೆಹಣ್ಣಿನ ಜೊತೆ ಯಾವೆಲ್ಲಾ ವಸ್ತು ತಿನ್ನಬಾರದು ನೋಡಿ.

ಹಾಲು ಹಾಗೂ ಹಾಲಿನಿಂದ ತಯಾರಿಸುವ ಯಾವುದೇ ವಸ್ತುವಿನೊಂದಿಗೆ ನಿಂಬೆಹಣ್ಣು ಸೇವಿಸಬಾರದು. ನಿಂಬೆ ಒಂದು ಹುಳ್ಳಿ ಹಣ್ಣಾಗಿದ್ದು, ಇದರಲ್ಲಿ ಸಿಟ್ರಸ...