Bengaluru, ಮಾರ್ಚ್ 18 -- ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 9 ತಿಂಗಳ ಕಾಲ ಅನಿವಾರ್ಯವಾಗಿ ಬಾಕಿ ಉಳಿದಿದ್ದ ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರುಪ್ರಯಾಣ ಬೆಳೆಸಿದ್ದಾರೆ. ಅವರ ಈ ಮರುಪ್ರಯಾಣದ ಇತ್ತೀಚಿನ ಚಿತ್ರನೋಟ ಇದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ನೇರ ಪ್ರಸಾರದ ವಿಡಿಯೋದಿಂದ ತೆಗೆದ ಚಿತ್ರ ಇದು. ಇದರಲ್ಲಿ ಸ್ಪೇಸ್‌ ಎಕ್ಸ್‌ನ ಕ್ರೂ ಕ್ಯಾಪ್ಸೂಲ್‌ ಭಾನುವಾರ ಯಶಸ್ವಿಯಾಗಿ ಐಎಸ್‌ಎಸ್‌ನಿಂದ ಹೊರಬಿದ್ದಿದೆ. ಗಗನಯಾತ್ರಿಗಳಾದ ಬುಚ್ ವಿಲ್ಮೋರ್‌, ಸುನಿತಾ ವಿಲಿಯಮ್ಸ್‌ ಅವರ ಮರು ಪ್ರಯಾಣದ ನೇರ ಪ್ರಸಾರದ ವಿಡಿಯೋವನ್ನು ನಾಸಾ ಮಾಡುತ್ತಿದೆ.

ಸ್ಪೇಸ್‌ ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಗಗನಯಾತ್ರಿಗಳಾದ ಬುಚ್‌ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಭೂಮಿ ಮರುಪ್ರಯಾಣ ಶುರುಮಾಡಿದ ಸಂದರ್ಭದ ವಿಡಿಯೋ ಚಿತ್ರ.

ಬುಚ್‌ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಐಎಸ್‌ಎಸ್‌ನಲ್ಲಿ 9 ತಿಂಗಳು ಬಾಕಿ ಉಳಿಯಬೇಕಾಗಿ ಬಂದಿತ್ತು. ಅವರು ಕಳೆದ ವರ್ಷ ಜ...