ಭಾರತ, ಮಾರ್ಚ್ 9 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ಗೂ ಮುನ್ನ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಭಾರತ ತಂಡಕ್ಕೆ ಭಯ ಹುಟ್ಟಿಸಿದ್ದ ನ್ಯೂಜಿಲೆಂಡ್​ನ ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್​ ಅವರನ್ನು ಚೈನಾಮೆನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಸ್ಪಿನ್ ಮಾಂತ್ರಿಕತೆಯ ಮೂಲಕ ಹೊರದಬ್ಬಿದರು. ಸೆಮಿಫೈನಲ್​ನಲ್ಲಿ 164 ರನ್​ಗಳ ಜೊತೆಯಾಟವಾಡಿದ್ದ ಈ ಇಬ್ಬರು ತಲಾ ಶತಕ ಸಿಡಿಸಿ ಮಿಂಚಿದ್ದರು. ಅಂತಹದ್ದೇ ಪ್ರದರ್ಶನ ಫೈನಲ್​ನಲ್ಲೂ ನೀಡುವ ಭೀತಿ ಹುಟ್ಟಿಸಿದ್ದ ಈ ಜೋಡಿ, ಬೇಗನೇ ಔಟಾಗಿ ಕಿವೀಸ್ ಕುಸಿತಕ್ಕೆ ಕಾರಣರಾದರು. ಕುಲ್ದೀಪ್ ತಮ್ಮ ಸತತ ಓವರ್​​ಗಳಲ್ಲಿ ಕೇನ್ ಮತ್ತು ರಚಿನ್​ರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಆ ಮೂಲಕ ನೆಟ್ಟಿಗರ ಬಾಯಿಗೆ ಸಕ್ಕರೆ ಹಾಕಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆರಂಭಿಸಿತು. ನಾಯಕನ ನಿರ್ಧಾರ ಸಮರ್ಥಿಸುವಂತೆ ಬ್ಯಾಟಿಂಗ್ ಮಾಡಿದ ರಚಿನ್ ರವೀಂದ್ರ ಭಾ...