Bengaluru, ಫೆಬ್ರವರಿ 16 -- Actor Pratham on Darshan: ನಟ ದರ್ಶನ್‌ ಅವರ ಅಭಿಮಾನಿಗಳಿಗೂ, ನಟ ಪ್ರಥಮ್‌ಗೂ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಸಣ್ಣಪುಟ್ಟ ವಾರ್‌ಗಳು ನಡೆಯುತ್ತಲೇ ಇರುತ್ತವೆ. ಈ ಹಿಂದೆ ದರ್ಶನ್‌ ಸಹಿತ ಅವರ ಅಭಿಮಾನಿಗಳ ಬಗ್ಗೆಯೂ ಪ್ರಥಮ್‌, ನೇರಾನೇರ ಮಾತನಾಡಿದ ಉದಾಹರಣೆಗಳೂ ಇವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್‌ ಆಗುತ್ತಿದ್ದಂತೆ, ಪ್ರಥಮ್‌ ನೀಡಿದ್ದ ಹೇಳಿಕೆ ದರ್ಶನ್‌ ಅಭಿಮಾನಿಗಳನ್ನು ಕೆರಳಿಸಿತ್ತು. ಪೊಲೀಸ್‌ ಠಾಣೆ ಮೆಟ್ಟಿಲೂ ಏರಿತ್ತು. ಇದೀಗ ಧನಂಜಯ್‌ ಮದುವೆ ಆರತಕ್ಷತೆಗೆ ಬಂದಾಗಲೂ ದರ್ಶನ್‌ ಅಭಿಮಾನಿಯನ್ನು ನಯವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ ಪ್ರಥಮ್.

ಅಷ್ಟಕ್ಕೂ ಆಗಿದ್ದೇನು? ಆರತಕ್ಷತೆ ಮುಗಿಸಿಕೊಂಡು ಮಾಧ್ಯಮಗಳ ಬಳಿ ಬಂದ ಒಳ್ಳೆ ಹುಡುಗ ಪ್ರಥಮ್‌, "ಜೈ ಡಿ ಬಾಸ್‌" ಎಂದು ಅಲ್ಲಿದ್ದ ದರ್ಶನ್‌ ಅಭಿಮಾನಿಯೊಬ್ಬರು ಘೋಷಣೆ ಕೂಗಿದ್ದಾರೆ. ಇಷ್ಟಕ್ಕೆ ಕೊಂಚ ಗರಂ ಆದ ಪ್ರಥಮ್‌, "ಅಣ್ಣ ನನಗೆ ನೀನು ಬಾಸ್‌, ನೋಡಿ ಅವನಿಗೆ ಮುಖ ತೋರಿಸೋಕು ಆಗ್ತಿಲ್ಲ. ಅವರ ಅಪ್ಪ ಇವನಿ...