ಭಾರತ, ಏಪ್ರಿಲ್ 16 -- ಕನಕರಾಜು ಸಿ ಬರಹ: ಮದುವೆ, ಉಪನಯನ, ವೈಕುಂಠ ಸಮಾರಾಧನೆಯಲ್ಲಿ ಆಹಾರ ವ್ಯರ್ಥ ಮಾಡುವವರ ಬಗ್ಗೆ ಮೈಸೂರಿನ ಕನಕರಾಜು ಸಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದ ಬರಹ ಇಲ್ಲಿದೆ. ನಾವು ಸಂಪೂರ್ಣ ಊಟ ಮಾಡುವುದರ ಜೊತೆಗೆ, ನಮ್ಮ ಮನೆಯವರಿಗೂ ಕಲಿಸೋಣ ಎಂಬ ಈ ಬರಹ ರುಚಿಕರ ಚರ್ಚೆಗೆ ಮುನ್ನುಡಿ ಬರೆದಿದೆ.

"ಇತ್ತೀಚೆಗೆ ಮದುವೆ, ಉಪನಯನ, ವೈಕುಂಠಸಮಾರಾಧನೆ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಎಲ್ಲಾ ಕಡೆ ನಾನು ಗಮನಿಸಿದ ಅಂಶ‌.

1. ಶೇಕಡಾ 50 ಊಟವನ್ನು ಜನರು ಚೆಲ್ಲುತ್ತಾರೆ.

2. ಬೇಕೋ ಬೇಡವೋ ಎಲ್ಲಾ ಪದಾರ್ಥಗಳನ್ನು ಎಲೆಗೆ ಹಾಕಿಸಿಕೊಳುತ್ತಾರೆ.

3. ಕುಡಿಯಲು ಪ್ಲಾಸಿಟ್ ಬಾಟಲಿಯಲ್ಲಿ‌ ನೀರು. ಅದನ್ನೂ ಅರ್ಧಕುಡಿದು ಹಾಗೆಯೇ ಬಿಟ್ಟುಹೋಗುತ್ತಾರೆ.

ನಾವು ಕಾರ್ಯಕ್ರಮದಲ್ಲಿ ಊಟದ ವಿಚಾರದಲ್ಲಿ ಶಿಸ್ತನ್ನೇ ಮರೆತಿದ್ದೇವೆ.

ಮೊದಲಿಗೆ ನಾವು ಊಟದ ಶಿಸ್ತನ್ನು ಕಲಿತಿಲ್ಲ, ನಮ್ಮ ಮಕ್ಕಳಿಗೆ ಕಲಿಸಿಲ್ಲ.

ಮೊದಲಿಗೆ ಎಲೆಯ ಮೇಲ್ಭಾಗದಲ್ಲಿ ಉಪ್ಪು, ಉಪ್ಪಿನಕಾಯಿ, ಪಲ್ಯಗಳು, ಕೋಸಂಬರಿ ಬಡಿಸುತ್ತ...