ಭಾರತ, ಮೇ 15 -- ಭಾರತದಂತಹ ದೇಶಗಳಲ್ಲಿ ಕೌಟುಂಬಿಕ ವ್ಯವಸ್ಥೆಗೆ ಬಹಳ ಪ್ರಾಮುಖ್ಯವಿದೆ. ʼವಸುದೈವ ಕುಟುಂಬಕಂʼ ಎಂಬ ಮಾತು ನೀವು ಕೇಳಿರಬಹುದು, ಹಾಗೆಂದರೆ ಇಡೀ ವಿಶ್ವವೇ ಎಂದು ಕುಟುಂಬ ಎಂದು. ನಾವು ಏನನ್ನೇ ಮರೆತರು ಎಲ್ಲಿಂದ ಬಂದಿದ್ದೇವೆ ಎಂಬ ನಮ್ಮ ಹಿನ್ನೆಲೆ, ಕುಟುಂಬ ಮರಿಬಾರ್ದು ಎಂದು ಹಿರಿಯರು ಹೇಳುತ್ತಾರೆ. ಕುಟುಂಬವಿದ್ದರೆ ನಾವು, ನಾವಿದ್ದರೆ ಕುಟುಂಬ, ಕುಟುಂಬಗಳಿದ್ದರೆ ಸಮಾಜ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಕುಟುಂಬ ನಮ್ಮ ಅಸ್ವಿತ್ವ ಎನ್ನುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಬದುಕಿನ ಕಷ್ಟಗಳಲ್ಲಿ ಯಾರು ನಮ್ಮ ಜೊತೆಗೆ ಇಲ್ಲ ಎಂದರೂ ಕುಟುಂಬ ನಮ್ಮ ಜೊತೆಗೆ ಇರುತ್ತದೆ ಎನ್ನುವುದೆಲ್ಲಾ ಹಿಂದಿನ ಕಾಲದ ಮಾತಾದರೂ ಕುಟುಂಬಕ್ಕೆ ಸಮಾಜದಲ್ಲಿ ತನ್ನದೇ ಆದ ಮಹತ್ವವಿದೆ. ಅಪ್ಪ-ಅಮ್ಮ, ಅಣ್ಣ-ತಂಗಿ, ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜ-ಅಜ್ಜಿ, ಮಾವ-ಅತ್ತೆ ಹೀಗೆ ಹಲವು ಸಂಬಂಧಗಳು ಒಟ್ಟಾಗಿ ಇರುವ ಕುಟುಂಬಗಳು ನಿಜಕ್ಕೂ ಪ್ರತಿಯೊಬ್ಬರ ಜೀವನದಲ್ಲೂ ಸಾಕಷ್ಟು ಮಹತ್ವವನ್ನು ಹೊಂದಿದೆ.

ಹೀಗೆ ಕುಟುಂಬದ ಮಹತ್ವವನ್ನು ಸಾರುವ...