Hubballi, ಏಪ್ರಿಲ್ 20 -- ಹುಬ್ಬಳ್ಳಿ: ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಸುರಕ್ಷತಾ ಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ಎಂಜಿನಿಯರಿಂಗ್ ಕಾರ್ಯಗಳು ನಡೆಯುತ್ತಿರುವುದರಿಂದ, ಕೆಲವು ದಿನಗಳ ಕಾಲ ಪ್ರಮುಖ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತಿದೆ. ಇನ್ನೂ ಕೆಲವು ರೈಲುಗಳು ಭಾಗಶಃ ರದ್ದಾಗಿವೆ. ಕೆಲವು ರೈಲುಗಳು ಸತತ 5 ದಿನಗಳ ಕಾಲ ಓಡುತ್ತಿಲ್ಲ. ಈ ಕುರಿತು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಹೀಗಾಗಿ ಪ್ರಯಾಣಿಕರು ಬದಲಿ ವ್ಯವಸ್ಥೆ ಮಾಡಿಕೊಂಡು ಪ್ರಯಾಣ ಮಾಡಲು ಕ್ರಮ ಕೈಗೊಳ್ಳಬಹುದು. ಉತ್ತರ ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಕರ್ನಾಟಕವನ್ನು ಬಾಗಲಕೋಟೆಗೆ ಸಂಪರ್ಕಿಸುವ ರೈಲುಗಳು ಕೂಡಾ ಭಾಗಶಃ ರದ್ದಾಗಿವೆ.

ಇದನ್ನೂ ಓದಿ | ಬೆಂಗಳೂರು ಹೊಸಪೇಟೆ ಪ್ಯಾಸೆಂಜರ್ ರೈಲು ಹೊಳಲ್ಕೆರೆ, ಅಮೃತಾಪುರ ರೈಲು ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ

Published by HT Digital Content Services with permission from HT Kannada....