ಭಾರತ, ಮೇ 1 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 30ರ ಸಂಚಿಕೆಯಲ್ಲಿ ಸುಬ್ಬು ತನ್ನ ಬಳಿ ಮಾತನಾಡದೇ ಹೊರಟು ಹೋದಾಗ ಶ್ರಾವಣಿಯನ್ನು ಹುಡುಕಿ ಬರುತ್ತಾಳೆ ಶ್ರೀವಲ್ಲಿ. 'ಹೊರಗಡೆ ಬಾ, ನಿನ್ನ ಜೊತೆ ಮಾತನಾಡಬೇಕು. ಇಲ್ಲಿ ಎಲ್ಲರ ಎದುರು ಮಾತನಾಡಿ ನಿನ್ನ ಮರ್ಯಾದೆ ಹೋಗೋದು ಬೇಡ' ಎಂದು ಹೊರಗಡೆ ಕರೆದುಕೊಂಡು ಹೋಗುತ್ತಾಳೆ. ಹೊರಗೆ ಹೋದ ಮೇಲೆ ಒಂದೇ ಸಮನೆ ಶ್ರಾವಣಿ ಮೇಲೆ ಆರೋಪ ಮಾಡಲು ಶುರು ಮಾಡುತ್ತಾಳೆ. 'ನೀನು ಸುಬ್ಬುವನ್ನು ಮೋಸ ಮಾಡಿ ಮದುವೆ ಆಗಿದ್ದೀಯಾ, ನೀನು ಮೋಸಗಾತಿ. ಈಗ ಮೋಸ ಮಾಡಿ ಸುಬ್ಬು ಕೈಯಲ್ಲಿ ಮ್ಯಾರೇಜ್ ಸರ್ಟಿಫಿಕೇಟ್‌ಗೆ ಸಹಿ ಹಾಕಿಸಿಕೊಂಡಿದ್ದೀಯಾ, ನನ್ನನ್ನು ಮದುವೆ ಆಗಬೇಕಿದ್ದ ಸುಬ್ಬುವನ್ನು ಮೋಸದಿಂದ ಮದುವೆ ಆಗಿ ನನ್ನ ಜೀವನ ಹಾಳು ಮಾಡಿದ್ದೀಯಾ. ಈ ನನಗೆ ನೀನು ಸಾಕಷ್ಟು ಮೋಸ ಮಾಡಿದ್ದೀಯಾ, ಈ ಮನೆಯನ್ನು ಸರ್ವನಾಶ ಮಾಡುವ ಸಲುವಾಗಿ ನೀನು ಬಂದಿದ್ದು, ಈ ಮನೆಯವರಿಗೂ ನೀನು ಮೋಸ ಮಾಡಿದ್ದೀಯಾ, ನೀನು ಮೋಸಗಾತಿ' ಎಂದೆಲ್ಲಾ ಬಾಯಿಗೆ ಬಂದಂತೆ ಮಾತನಾಡುತ್ತಾಳೆ. ಅಲ್ಲಿಯವರೆಗೂ ಸುಮ್ಮನೆ ಕೇಳಿಸಿಕೊಳ್...