ಭಾರತ, ಫೆಬ್ರವರಿ 18 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಫೆಬ್ರುವರಿ 17ರ ಸಂಚಿಕೆಯಲ್ಲಿ ಮನೆಯೊಳಗೆ ಆಟೊ ಡ್ರೈವರ್ ನೋಡಿ ರಂಪಾಟ ಮಾಡುತ್ತಾರೆ ಕಾಂತಮ್ಮ, ಸುಂದರ. ಅವರನ್ನು ಶ್ರಾವಣಿಯೇ ಕರೆಸಿದ್ದು ಎಂದು ತಿಳಿದು ನಾಲಿಗೆ ಹರಿಬಿಡುತ್ತಾರೆ. ಅವರಿಗೂ ಬಂದಿರುವುದು ಪದ್ಮನಾಭ ಎಂದು ತಿಳಿದಿರುವುದಿಲ್ಲ. ಆದರೆ ಶ್ರಾವಣಿ ಮಾತ್ರ ದುಡಿಯುವವರನ್ನು ಕೇವಲವಾಗಿ ನೋಡುವ ಅವರ ಮನಸ್ಥಿತಿಯ ಬಗ್ಗೆ ದಿಟ್ಟವಾಗಿ ಮಾತನಾಡುತ್ತಾಳೆ.

ಆಟೊ ಡ್ರೈವರ್ (ಪದ್ಮನಾಭ) ಅವರು ಹೊರ ಹೋಗುವ ಹೊತ್ತಿಗೆ ಚೀಲ ಹಿಡಿದು ಒಬ್ಬ ವ್ಯಕ್ತಿ ಸುಬ್ಬು ಮನೆಯೊಳಗೆ ಪ್ರವೇಶಿಸುತ್ತಾರೆ. ಅವನು ಯಾರು ಎಂದು ಕೇಳಿದಾಗ ಮದುವೆಗೆ ಮನೆ ಅಲಂಕಾರಕ್ಕೆ ಲೈಟಿಂಗ್ ಮಾಡಲು ಬಂದಿರುವುದು ಎನ್ನುವುದು ತಿಳಿಯುತ್ತದೆ. ಅದನ್ನು ಕೇಳಿ ವರಲಕ್ಷ್ಮೀ ಕಣ್ಣೀರು ಧಾರೆಯಾಗಿ ಹರಿಯುತ್ತದೆ. ಆದರೆ ಆ ಹುಡುಗನಿಗೆ ಬಿಕ್ಕಳಿಗೆ ಬಂತು ಎಂದು ಶ್ರಾವಣಿ ಅವನಿಗೆ ನೀರು ಕೊಡುತ್ತಾಳೆ. ಇದನ್ನು ನೋಡಿ ತಡೆದುಕೊಳ್ಳದ ಧನಲಕ್ಷ್ಮೀ ಶ್ರಾವಣಿಗೆ ಬಾಯಿಗೆ ಬಂದಂತೆ ಮಾತನಾಡುತ್ತಾಳೆ. ನಿನ್ನಿಂದ ಈ ಮನೆಯ ಸಂತ...