ಬೆಂಗಳೂರು, ಮೇ 30 -- ನಾರ್ವೆ ಚೆಸ್ (Norway Chess) ರೋಚಕ ಹಂತದತ್ತ ಸಾಗುತ್ತಿದೆ. ಹಾಲಿ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರು ಅಮೆರಿಕದ ಗ್ರ್ಯಾಂಡ್ ಮಾಸ್ಟರ್ ಫ್ಯಾಬಿಯಾನೊ ಕರುವಾನಾ ವಿರುದ್ಧ ರೋಚಕ ಟೈ ಬ್ರೇಕರ್‌ನಲ್ಲಿ ಗೆದ್ದು ಬೀಗಿದ್ದಾರೆ. ಅತ್ತ ಭಾರತದ ಮತ್ತೊಬ್ಬ ಗ್ರ್ಯಾಂಡ್‌ ಮಾಸ್ಟರ್ ಅರ್ಜುನ್ ಎರಿಗೈಸಿ, ನಾರ್ವೆ ಚೆಸ್‌ನ 'ಓಪನ್' ವಿಭಾಗದಲ್ಲಿ ಚೆಸ್‌ ಚತುರ ಮ್ಯಾಗ್ನಸ್ ಕಾರ್ಲ್‌ಸನ್ ಅವರ ಕೌಶಲ್ಯದ ಆಟದ ಮುಂದೆ ಮಣಿದರು. ಹೀಗಾಗಿ ಈ ದಿನ ನಾರ್ವೆ ಚೆಸ್‌ನಲ್ಲಿ ಭಾರತೀಯರಿಗೆ ಮಿಶ್ರ ದಿನವಾಗಿದೆ.

ವಿಶ್ವದ 3ನೇ ಶ್ರೇಯಾಂಕಿತ ಆಟಗಾರ ಕರುವಾನಾ, ಭಾರತೀಯ ಚಾಂಪಿಯನ್‌ ಆಟಗಾರ ಗುಕೇಶ್‌ ವಿರುದ್ಧ ರೌಂಡ್ 4 ಪಂದ್ಯದಲ್ಲಿ ಬಹುಪಾಲು ಭಾಗವನ್ನು ಉತ್ತಮ ಆಟವಾಡಿದರು. ದಾಳದ ಅನುಕೂಲವನ್ನು ಪಡೆದರು. ಆದರೆ, ಗುರುವಾರವಷ್ಟೇ 19ನೇ ವರ್ಷಕ್ಕೆ ಕಾಲಿಟ್ಟ ಗುಕೇಶ್ ಅವರ ಅದ್ಭುತ ರಕ್ಷಣಾತ್ಮಕ ಕೌಶಲ್ಯದ ಮುಂದೆ, ಅಮೆರಿಕನ್‌ ಆಟಗಾರನ ಆಟ ನಡೆಯಲಿಲ್ಲ. ನಾಲ್ಕು ಗಂಟೆಗಳ ಮನಮೋಹಕ ಚೆಸ್‌ನಲ್ಲಿ ಪ್ರಬುದ್ಧ ಆಟವಾಡಿದ ಗುಕೇಶ್‌ ಮುಂದೆ ಎದುರ...