ಭಾರತ, ಏಪ್ರಿಲ್ 11 -- ನಾಯಕ ಬದಲಾದರೂ ಸಿಎಸ್‌ಕೆ ತಂಡದ ಹಣೆಬರಹ ಮಾತ್ರ ಬದಲಾಗಲಿಲ್ಲ. ಐಪಿಎಲ್‌ 18ನೇ ಆವೃತ್ತಿಯಲ್ಲಿ ಯೆಲ್ಲೋ ಆರ್ಮಿಗೆ ಅದೃಷ್ಟ ಕೈಹಿಡಿಯುತ್ತಿಲ್ಲ. ಐಪಿಎಲ್‌ ಆಡಿದ 16 ವರ್ಷಗಳ ಇತಿಹಾಸದಲ್ಲಿ (ಉಳಿದ ಎರಡು ವರ್ಷ ಸಿಎಸ್‌ಕೆ ಬ್ಯಾನ್‌ ಆಗಿತ್ತು) ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸತತ 5 ಪಂದ್ಯಗಳಲ್ಲಿ ಸೋತಿದೆ. ಅಷ್ಟೇ ಅಲ್ಲ ತಾನು ಬಲಿಷ್ಠವಾಗಿದ್ದ ತವರು ಮೈದಾನ ಚೆಪಾಕ್‌ನಲ್ಲಿ ಇದೇ ಮೊದಲ ಬಾರಿಗೆ ಸತತ ಮೂರು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದೆ. ಕೆಕೆಆರ್‌ ವಿರುದ್ಧ ಅತ್ಯಲ್ಪ ಮೊತ್ತ ಕಲೆಹಾಕಿ ಕಳಪೆ ದಾಖಲೆ ನಿರ್ಮಿಸಿದ ತಂಡವು, ಟೂರ್ನಿಯಲ್ಲಿ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಕೆಕೆಆರ್‌ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಸಿಎಸ್‌ಕೆ 9 ವಿಕೆಟ್‌ ನಷ್ಟಕ್ಕೆ ಕೇವಲ 103 ರನ್‌ ಗಳಿಸಿತು. ಇದು ಚೆಪಾಕ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಈವರೆಗಿನ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಮಾಹಿ ...