ಭಾರತ, ಫೆಬ್ರವರಿ 6 -- ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರು (Cristiano Ronaldo) ಫೆಬ್ರವರಿ 5ರಂದು 40ನೇ ವಸಂತಕ್ಕೆ ಕಾಲಿಟ್ಟರು. 1985ರಲ್ಲಿ ಜನಿಸಿದ ಫುಟ್ಬಾಲ್ ಕಿಂಗ್ ಪ್ರಸ್ತುತ ಸೌದಿ ಅರೇಬಿಯಾದ ಕ್ಲಬ್ ಅಲ್ ನಾಸ್ಸರ್ ಪರ ಕಣಕ್ಕಿಳಿಯುತ್ತಿದ್ದಾರೆ. 2026ರ ಫಿಫಾ ಫುಟ್ಬಾಲ್ ವಿಶ್ವಕಪ್​​ ಟೂರ್ನಿ ಆಡುವುದರ ಜೊತೆಗೆ ಫುಟ್ಬಾಲ್ ಇತಿಹಾಸದಲ್ಲಿ 1,000 ಗೋಲುಗಳ ಮೈಲಿಗಲ್ಲನ್ನು ಮುಟ್ಟುವ ಗುರಿಯನ್ನೂ ಹೊಂದಿರುವ ಅವರ ಗೋಲುಗಳ ಸಂಖ್ಯೆ 923. ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆ 135.

ತಮ್ಮ ವೃತ್ತಿಜೀವನ ಅಂತ್ಯದಲ್ಲಿದ್ದರೂ ರೊನಾಲ್ಡೊ ಅವರಿಗೆ ಫುಟ್ಬಾಲ್ ಮೇಲಿರುವ ಪ್ರೀತಿ ಅಥವಾ ಗೋಲುಗಳ ಹಸಿವು ಕಿಂಚಿತ್ತೂ ಕಡಿಮೆಯಾಗಿಲ್ಲ. ಬದಲಾಗಿ, ಅದೊಂದು ವ್ಯಸನವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮ್ಯಾಂಚೆಸ್ಟರ್ ಯುನೈಟೆಡ್​ನ ಮಾಜಿ ತಾರೆ ರೊನಾಲ್ಡೊ ಅವರು ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ಅರ್ಜೆಂಟ...