Bengaluru, ಫೆಬ್ರವರಿ 2 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 1ರ ಸಂಚಿಕೆಯಲ್ಲಿ ಕಥಾನಾಯಕಿ ಭಾಗ್ಯಾಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಭಾಗ್ಯಾಳ ಶತ್ರುಗಳಾಗಿರುವ ಶ್ರೇಷ್ಠಾ ಮತ್ತು ಕನ್ನಿಕಾ, ಅವಳ ಕೆಲಸವನ್ನು ಕಿತ್ತುಕೊಳ್ಳುವ ಪ್ಲ್ಯಾನ್ ರೂಪಿಸಿದ್ದರು. ಹಾಗೆ ಮಾಡಿದರೆ, ಅವಳಿಗೆ ಹಣಕಾಸಿನ ನೆರವು ಇರುವುದಿಲ್ಲ ಮತ್ತು ಅದರಿಂದ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ಕುಟುಂಬವನ್ನು ಸಾಕುತ್ತಿರುವ ಅವಳಿಗೆ ಸಂಕಷ್ಟ ಬರುತ್ತದೆ ಎಂದು ಅವರು ಸಂಚು ಮಾಡಿದ್ದರು. ಅದರಂತೆ ಹೋಟೆಲ್‌ಗೆ ಬಂದ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆಯ ಪ್ರಹಸನ ಸೃಷ್ಟಿಸಿ, ಭಾಗ್ಯಾ ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಅಲ್ಲದೆ, ಮಾಧ್ಯಮದವರು ಕೂಡ ಹೋಟೆಲ್ ಮುಂದೆ ಕಾಯುತ್ತಿದ್ದಾರೆ. ಮತ್ತೊಂದೆಡೆ ವಿಐಪಿ ಅತಿಥಿಯ ಕಡೆಯವರು ಎಂದು ಹೇಳಿಕೊಂಡು ಒಂದಷ್ಟು ಮಂದಿ ಹೊಟೆಲ್ ಹೊರಗಡೆ ಗಲಾಟೆ ಮಾಡುತ್ತಿದ್ದಾರೆ.

ಹೋಟೆಲ್‌ನ ಅಡುಗೆಯ ಉಸ್ತುವಾರಿ ಹೊಂದಿದ್ದ ಭಾಗ್ಯಾಗೆ ಅವಳ ಸಹೋದ್ಯೋಗಿಗಳು ಬೆಂಬಲವಾಗಿ ನಿಲ್ಲುತ್ತಾರೆ. ...