ಭಾರತ, ಮಾರ್ಚ್ 9 -- ಬೆಂಗಳೂರು: ಚಿನ್ನಕಳ್ಳಸಾಗಣೆ ಆರೋಪದಡಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ (Ranya Rao), ವಿಚಾರಣೆ ವೇಳೆ ತಾನು ತಪ್ಪಿತಸ್ಥೆ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ಚಿನ್ನ ಕಳ್ಳಸಾಗಣೆ ದಂಧೆಯಲ್ಲಿ ಭಾಗವಾಗಿರುವುದನ್ನು ನಿರಾಕರಿಸಿದ್ದಾರೆ. ಅಲ್ಲದೆ, ಈ ದಂಧೆಯಲ್ಲಿ ತನ್ನನ್ನು 'ಸಿಕ್ಕಿಹಾಕಿಸಲಾಗಿದೆ' ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸುಮಾರು 12 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ರನ್ಯಾ ಅವರನ್ನು ಕಳೆದ ಸೋಮವಾರ (ಮಾರ್ಚ್‌ 3) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಿಚಾರಣೆಯ ಸಮಯದಲ್ಲಿ ರಾವ್ ಒಂದೇ ಸಮನೆ ಅತ್ತಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಅಲ್ಲದೆ ತಾನು 'ನಿರಪರಾಧಿ' ಎಂದು ಹೇಳಿಕೊಂಡಿದ್ದಾರೆ. ಬಂಧನಕ್ಕೊಳಗಾದ ದಿನದಿಂದ ತನಗೆ ನಿದ್ರೆ ಬರುತ್ತಿಲ್ಲ. 'ನಾನು ಹೇಗೆ ಈ ಪ್ರಕರಣದಲ್ಲ...