Mysuru, ಏಪ್ರಿಲ್ 8 -- Karnataka 2nd Puc Result 2025: ನಾನು ಓದಿದ್ದು ಮಂಡ್ಯದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ . ಎಸ್‌ಎಸ್‌ಎಲ್‌ಸಿಯಲ್ಲಿ ಚೆನ್ನಾಗಿ ಅಂಕ ಪಡೆದಿದ್ದರಿಂದ ಅಪ್ಪ ಪಿಯುಸಿಯಲ್ಲಿ ವಿಜ್ಞಾನಕ್ಕೆ ಸೇರಿಸಿದರು. ಕಷ್ಟ ಪಟ್ಟು ಓದಿದೆ. ಅದೂ ದ್ವಿತೀಯ ಪಿಯುಸಿಯ ನಮ್ಮ ವಯಸ್ಸು ತಾರುಣ್ಯದಿಂದ ಯೌವ್ವನಕ್ಕೆ ಬರುವ ಕಾಲ. ಹುಚ್ಚುಕೋಡಿ ಮನಸ್ಸು ನಿಯಂತ್ರಿಸುವುದೇ ಸವಾಲು. ಚೆನ್ನಾಗಿಯೇ ಪರೀಕ್ಷೆ ಎದುರಿಸಿದ್ದೆ. ಫಲಿತಾಂಶದ ದಿನ ಏನಾಗುತ್ತದೋ ಎನ್ನುವ ಭಯ ಎಲ್ಲರಂತೆ ಕಾಡಿತ್ತು. ಚೆನ್ನಾಗಿಯೇ ಬರೆದಿದ್ದೇನೆ ನೋಡೋಣ ಏನಾಗುತ್ತೋ ಎಂದು ಸಹಜವಾಗಿಯೇ ಇದ್ದೆ. ಕಾಲೇಜಿನಲ್ಲಿ ಫಲಿತಾಂಶದ ಪಟ್ಟಿ ಹಾಕಿದ್ದ ಮಾಹಿತಿ ಕೇಳಿ ಹೋಗಿ ನೋಡಿದರೆ ನಾನೂ ಉತ್ತೀರ್ಣನಾಗಿದ್ದೇನೆ. ಅದೂ ಸೆಕೆಂಡ್‌ ಕ್ಲಾಸ್‌ ಪಡೆದವರ ಪಟ್ಟಿಯಲ್ಲಿದ್ದೆ. ಯಾವುದೇ ಬೇಸರವಾಗಲಿಲ್ಲ. ಇನ್ನಷ್ಟು ಅಂಕ ಬರಬೇಕಿತ್ತು ಅನ್ನಿಸಿದ್ದರೂ ಮುಂದೆ ಬಿಎಸ್ಸಿ ಸೇರಿ ರಂಗಭೂಮಿ ಕಲಾವಿದನಾದೆ. ಬದುಕಿನ ಪರೀಕ್ಷೆಯಲ್ಲಿ ಗೆದ್ದ ಖುಷಿ ನನ್ನಲ್ಲು ಈಗಲೂ ಇದೆ. ಇಂದು ಫಲಿತಾಂಶ ನ...