ಭಾರತ, ಮಾರ್ಚ್ 8 -- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಿ. ಲಂಕೇಶ್‌ ನಿರ್ದೇಶನದ ಪಲ್ಲವಿ ಎಂಬ ಸಿನಿಮಾ ಪ್ರದರ್ಶನಗೊಂಡಿದೆ. 1976ರಲ್ಲಿ ತೆರೆಕಂಡ ಪಲ್ಲವಿ ಸಿನಿಮಾವನ್ನು ಪಿ. ಲಂಕೇಶ್‌ ನಿರ್ದೇಶಿಸಿದ್ದಾರೆ. ಇದು ಪಿ. ಲಂಕೇಶ್‌ ನಿರ್ದೇಶನದ ಮೊದಲ ಚಿತ್ರ. ಟಿಎನ್‌ ಸೀತಾರಾಮ್‌ ನಾಯಕ ಮತ್ತು ವಿಮಲಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ. ಜನಪ್ರಿಯ ಸೀರಿಯಲ್‌ ನಿರ್ದೇಶಕರು, ನಟರೂ ಆಗಿರುವ ಟಿಎನ್‌ ಸೀತಾರಾಮ್‌ ಈ ಸಿನಿಮಾವನ್ನು ಸಿನಿಮೋತ್ಸವದಲ್ಲಿ ತನ್ನ ಆಪ್ತರ ಜತೆ ಕುಳಿತು ವೀಕ್ಷಿಸಿದ್ದಾರೆ. ಈ ಸಿನಿಮಾದ ಕುರಿತು ಟಿಎನ್‌ ಸೀತಾರಾಮ್‌ ಫೇಸ್‌ಬುಕ್‌ನಲ್ಲಿ ಈ ಮುಂದಿನಂತೆ ಬರೆದಿದ್ದಾರೆ.

"ಸುಮಾರು 48-49 ವರ್ಷಗಳ ಹಿಂದೆ ನನ್ನ ಗುರುಗಳಾದ ಲಂಕೇಶ್ ರವರು ಪಲ್ಲವಿ ಎನ್ನುವ ಚಿತ್ರ ಮಾಡಿದ್ದರು. ಅದರಲ್ಲಿ ನನ್ನನ್ನು ಹೀರೋ ಎಂದು ಆಯ್ಕೆ ಮಾಡಿದ್ದರು. ಅದಕ್ಕೆ ಆ ವರ್ಷ ರಜತ ಕಮಲ ಪ್ರಶಸ್ತಿ ಬಂದಿತ್ತು.ನನ್ನನ್ನು ಮಾಜಿ ಹೀರೋ ಆಗಿದ್ದೆ ಎಂದು ಕಲ್ಪಿಸಿಕೊಳ್ಳಲೂ ಸಾಧ್ಯ ಆಗದಿರಬಹುದು. ಆದರೆ ಅಂದು ಆಗಿದ್ದೆ‌!

ಇಂದು ಅ...