ಭಾರತ, ಮೇ 26 -- ಮೂವರು ಸಂಗಾತಿಗಳು ಇದ್ದಾರಂತೆ. ಅವರು ಯಾರು ಎಂಬುದನ್ನು ಟಿವಿ 9ಗೆ ಕೆಲವು ತಿಂಗಳುಗಳ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಹಂಸಲೇಖ, 'ಈ ಚಿಕ್ಕ ಜೀವನದಲ್ಲಿ ಮೂವರು ಪ್ರಮುಖ ವ್ಯಕ್ತಿಗಳು ಸಿಕ್ಕರು. ನನ್ನ ಸಂಗಾರಿ ಲತಾ. ಸಂಗೀತ ಸಂಗಾತಿ ಎಸ್‍.ಪಿ. ಬಾಲಸುಬ್ರಹ್ಮಣ್ಯಂ. ನನ್ನ ಸಿನಿಮಾ ಸಂಗಾತಿ ರವಿಚಂದ್ರನ್‍. ನನ್ನ ಜೀವನವನ್ನು ಈ ಮೂರು ಬೆಳಕುಗಳು ಕಟ್ಟಿಕೊಟ್ಟಿವೆ. ಹಾಗಾಗಿ, ತಿರುಗಿ ನೋಡಬೇಕು ಎಂದು ಹೇಳೋದು. ತಿರುಗಿ ನೋಡಿದರೆ ಮೂಲ ನೆನಪಿರುತ್ತದೆ' ಎಂದು ಹೇಳಿದ್ದಾರೆ.

ಇನ್ನು, ಅವರ ಮನೆಯಲ್ಲಿ ರವಿಚಂದ್ರನ್‍ ಮತ್ತು ಅವರ ತಂದೆ ವೀರಾಸ್ವಾಮಿಯವರ ಜೊತೆಗಿರುವ ಫೋಟೋಗಳಿವೆ. ಈ ಫೋಟೋಗಳ ಮಹತ್ವವನ್ನು ವಿವರಿಸುವ ಅವರು, 'ನಾನು ಶ್ರಮಿಕವರ್ಗದವನು. ಯಾವುದೋ ಪುಣ್ಯದಿಂದ ಓದಿನ ಸಂಸ್ಕಾರ, ಸಂಸ್ಕಾರ ಬಂದಿದೆ. ಅದು ವಿಶೇಷ ನನಗೆ. ಆದರೂ ನನ್ನ ಬದುಕಿನ ವಿನ್ಯಾಸ ಚಿಕ್ಕದು. ದುಡಿ, ತಿನ್ನು, ಮಲಗು ಇಷ್ಟೇ ಆಗುತ್ತದೆ. ಇಷ್ಟೇ ಚಿಕ್ಕ ವಿನ್ಯಾಸಕ್ಕೆ ಅಷ್ಟು ದೊಡ್ಡ ಕ್ಯಾನ್ವ...