ಭಾರತ, ಮಾರ್ಚ್ 10 -- ಭಾರತದ ಕಿತ್ತಳೆ ನಗರಿ ನಾಗ್ಪುರದ ಮಿಹಾನ್‌ನಲ್ಲಿ ಪತಂಜಲಿಯ ಮೆಗಾ ಆಹಾರ ಮತ್ತು ಗಿಡಮೂಲಿಕೆ ಪಾರ್ಕ್ ಆರಂಭಗೊಂಡಿದೆ. ಇದು ಏಷ್ಯಾದ ಅತಿದೊಡ್ಡ ಕಿತ್ತಳೆ ಸಂಸ್ಕರಣಾ ಘಟಕವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಸುಮಾರು 1,500 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಾಣವಾದ ಘಟಕವನ್ನು ಭಾನುವಾರ (ಮಾ.9) ಉದ್ಘಾಟಿಸಲಾಗಿದೆ. ಮಹಾರಾಷ್ಟ್ರದ ನಾಗ್ಪುರವು ಭಾರತದಲ್ಲಿ ಅತಿ ಹೆಚ್ಚು ಕಿತ್ತಳೆ ಹಣ್ಣುಗಳನ್ನು ಬೆಳೆಯುವ ನಗರವಾಗಿದೆ. ಅದರಂತೆ ಈ ಸಂಸ್ಕರಣಾ ಘಟಕ ನಗರಕ್ಕೆ ಅನುಕೂಲಕರವಾಗಿದೆ. ಈ ಮೆಗಾ ಫುಡ್ ಪಾರ್ಕ್ ವಿದರ್ಭದ ಕೃಷಿ ಭೂದೃಶ್ಯವನ್ನು ಪರಿವರ್ತಿಸುವ ಭರವಸೆ ನೀಡುತ್ತದೆ.

ಪ್ರತಿದಿನ 800 ಟನ್ ಹಣ್ಣುಗಳನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಪತಂಜಲಿಯ ಮೆಗಾ ಫುಡ್ ಮತ್ತು ಹರ್ಬಲ್ ಪಾರ್ಕ್ ಕುರಿತು ನೀವು ತಿಳಿದುಕೊಳ್ಳಬೇಕಾದ 10 ವಿಷಯಗಳು ಹೀಗಿವೆ.

1) ನಾಗ್ಪುರದ ಮಿಹಾನ್‌ನಲ್ಲಿ 1,500 ಕೋಟಿ ರೂ. ಹೂಡಿಕೆಯೊಂದಿಗೆ ಪತಂಜಲಿ ಮೆಗಾ ಫುಡ್ ಮತ್ತು ಹರ್ಬಲ್ ಪಾರ್ಕ್ ಭಾನುವಾರ ಕಾರ್ಯಾಚರಣೆ ಆರಂಭಿಸಿದೆ.

2) ಕೇಂದ...