Kodagu, ಜೂನ್ 18 -- ಅತ್ತೂರು ಕೊಲ್ಲಿ( ಕೊಡಗು): ಒಂದೂವರೆ ತಿಂಗಳ ಹಿಂದೆಯೇ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅತ್ತೂರು ಹಾಡಿಯಲ್ಲಿ ಪ್ರವೇಶಿಸಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಜೇನುಕುರುಬ ಕುಟುಂಬಗಳು ಮತ್ತೆ ಆರು ಗುಡಿಸಲು ನಿರ್ಮಿಸಲು ಮುಂದಾಗಿದ್ದು, ಇದನ್ನು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಡೆದಿದ್ದಾರೆ. ಅಲ್ಲಿ ನಿರ್ಮಿಸಲು ಮುಂದಾಗಿದ್ದ ಗುಡಿಸಲುಗಳನ್ನು ತೆರವುಗೊಳಿಸಿದರು. ಟೆಂಟ್‌ಗಳು, ಮರಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳಿಂದ ಅಲ್ಲಿ ಗುಡಿಸಲು ನಿರ್ಮಿಸಲು ಮುಂದಾದ ವಿಷಯ ಅರಿತ ಅರಣ್ಯ ಇಲಾಖೆಯವರು ನೊಟೀಸ್‌ ಅನ್ನು ಜಾರಿ ಮಾಡಿದ್ದರು. ಆದರೂ ನಿರ್ಮಾಣ ಮುಂದುವರಿಸಿದ್ದರಿಂದ ಪೊಲೀಸ್‌ ಇಲಾಖೆಯ ಸಹಕಾರದೊಂದಿಗೆ ನಾಗರಹೊಳೆ ಅಭಯಾರಣ್ಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವುಗೊಳಿಸಿದರು.

ದಶಕಗಳ ಇಲ್ಲಿಯೇ ಇದ್ದು, ನಮಗೆ ಪುನರ್ವಸತಿ ಕಲ್ಪಿಸಬೇಕೆಂದು ಕೊಡಗು ಭಾಗದಲ್ಲಿ ನೆಲೆಸಿರುವ ಜೇನುಕುರುಬ ಕುಟುಂಬಗಳವರು ಹಲವು ವರ್ಷದಿಂದ ಹೋರಾಟ ನಡೆಸಿದ್ದಾರೆ. ಅರಣ್ಯ ಇಲಾಖೆಯು ನ...