‌bangalore, ಏಪ್ರಿಲ್ 1 -- ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ಹಡ್ಲುಗಳನ್ನು ಹಕ್ಕು ಅರ್ಜಿದಾರರಿಗೆ ಮಂಜೂರು ಮಾಡುವುದರಿಂದ ಕೊಡಗಿನ ವಿರಾಜಪೇಟೆ ತಾಲ್ಲೂಕಿನಲ್ಲಿ ಉಂಟಾಗುವ ಗಂಭೀರ ಮಾನವ-ವನ್ಯಜೀವಿ ಸಂಘರ್ಷದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕದ ದಕ್ಷ ಅಧಿಕಾರಿಯಾಗಿದ್ದ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್‌ ಅವರು ಪತ್ರ ಬರೆದಿದ್ದಾರೆ.ಸರ್ಕಾರವು, ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಅರ್ಜಿ ಹಾಕಿರುವವರಿಗೆ ಅಲ್ಲಿನ ಹಡ್ಲುಗಳನ್ನು ತಲಾ ಮೂರು ಎಕರೆಗಳಂತೆ ಮಂಜೂರು ಮಾಡಲು ಆತುರದ ನಿರ್ಧಾರ ತೆಗೆದುಕೊಂಡು, ಸರ್ವೇ ಕಾರ್ಯವನ್ನು ಕೈಗೆತ್ತಿಕೊಂಡಿರುವ ವಿಷಯ ನನಗೆ ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಇದನ್ನು ತಡೆಯಬೇಕು ಎಂಬುದು ಅವರ ಮನವಿ.

ಈ ವಿಷಯವನ್ನು ನಾನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (PCCF & HFD) ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (ವನ್ಯಜೀವಿ) (Chief Wildlife Warden) ಜೊತೆ ಫೋನಿನ ಮೂಲಕ ಚರ್ಚಿಸಿದ್ದೇನೆ ಮತ್ತ...