ಭಾರತ, ಏಪ್ರಿಲ್ 27 -- ಸುಮಾರು 7 ವರ್ಷಗಳ ಹಿಂದೆ ನಿಷೇಧಿಸಿರುವ ಎತ್ತರದ ಹೋರ್ಡಿಂಗ್​​ ಅನ್ನು ಮತ್ತೆ ಚಾಲ್ತಿಗೆ ತರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಆದಾಯ ನಷ್ಟಕ್ಕೆ ಒಳಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಲಿಕೆ ಈಗ ವಾಣಿಜ್ಯ ಜಾಹೀರಾತುಗಳ ಮೂಲಕ ನಷ್ಟ ಭರ್ತಿಗೆ ನಿರ್ಧರಿಸಿದ್ದು, ಮತ್ತೆ ಅವಕಾಶ ನೀಡಲು ಕಾನೂನು ಕ್ರಮಕ್ಕೆ ಮುಂದಾಗಿದೆ. 2018ರ ಬೈಲಾಗಳ ಚೌಕಟ್ಟಿನ ಅಡಿಯಲ್ಲಿ ವಾಣಿಜ್ಯ ಜಾಹೀರಾತಗಳ ನಿಷೇಧ ಹಿಂಪಡೆಯಲು ಚಿಂತಿಸುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ. ಆದರೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

2024ರಲ್ಲಿ ರಾಜ್ಯ ಸರ್ಕಾರ ಪರಿಚಯಿಸಿದ ಹೊಸ ಜಾಹೀರಾತು ನೀತಿಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್​ನ ತೀರ್ಪು ಇನ್ನೂ ಬರಬೇಕಿದೆ. ನಾಗರಿಕ ಸಂಸ್ಥೆಯೂ ನ್ಯಾಯಾಲಯದ ಮಹತ್ವದ ತೀರ್ಪಿಗಾಗಿ ಕಾಯುತ್ತಿದೆ. ಆದರೆ ಅದಕ್ಕೂ ಮುನ್ನವೇ ಬಿಬಿಎಂಪಿ ಈ ನಿರ್ಧಾರವನ್ನು ಕೈಗೊಂಡಿದೆ. ನ್ಯಾಯಾಲಯವು ಈ ನೀತಿ ಯಾವ...