ಭಾರತ, ಮೇ 27 -- ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಹಾಗೂ ಸಂಬಂಧಗಳಲ್ಲಿ ಧನಾತ್ಮಕ ಶಕ್ತಿ ಹರಿಯಲು ಮತ್ತು ನಕಾರಾತ್ಮಕ ಶಕ್ತಿ ದೂರವಾಗಲು ಅವಕಾಶ ಒದಗುತ್ತದೆ. ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರಿಂದ ಸಂತೋಷ, ಶಾಂತಿ, ಸಮೃದ್ಧಿ ಸಿಗುತ್ತದೆ.

ನವವಿವಾಹಿತರು ವಾಸ್ತು ಪ್ರಕಾರ ಈ ಸಲಹೆಗಳನ್ನು ಅನುಸರಿಸಿದರೆ, ಸಕಾರಾತ್ಮಕ ಶಕ್ತಿಯು ಹರಿಯುತ್ತದೆ. ನಕಾರಾತ್ಮಕ ಶಕ್ತಿ ಅವರ ಬಳಿಯೂ ಸುಳಿಯುವುದಿಲ್ಲ. ಗಂಡ ಹೆಂಡತಿಯ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ಮಲಗುವ ಕೋಣೆ ವಾತಾವರಣ, ಪ್ರೀತಿ, ಸಾಮರಸ್ಯ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿರಬೇಕು. ಮಲಗುವ ಕೋಣೆ ಸರಿಯಾದ ದಿಕ್ಕಿನಲ್ಲಿರಬೇಕು. ಶುಭ ಫಲಿತಾಂಶಗಳನ್ನು ನೀಡುವ ವಸ್ತುಗಳನ್ನು ಹೊಂದಿರುವುದು ಒಳ್ಳೆಯದು. ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ, ತಿಳುವಳಿಕೆ ಮತ್ತು ಸಮೃದ್ಧಿ ಇರಬೇಕೆಂದು ನೀವು ಬಯಸಿದರೆ, ಈ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸಿ.

ಮಲಗುವ ಕೋಣೆಯಲ್ಲಿ ರಾಧಾ ಮತ್ತು ಕೃಷ್ಣನ ಫೋಟೊ ಇಡುವುದರಿಂ...