ಭಾರತ, ಮೇ 11 -- ಸಾಮಾನ್ಯವಾಗಿ ಮೊದಲ ಬಾರಿಗೆ ಸೀರೆ ಉಡುವ ತರುಣಿಯರಲ್ಲಿ ಸೀರೆ, ಬ್ಲೌಸ್‌ ಬಗ್ಗೆ ಕ್ರೇಜ್‌ ಜಾಸ್ತಿ ಇರುತ್ತದೆ. ಯಾವುದೇ ಕಾಲೇಜು ಫಂಕ್ಷನ್‌ ಆಗಿರಬಹುದು ಅಥವಾ ಮದುವೆಯಂತಹ ಕಾರ್ಯಕ್ರಮವಿರಬಹುದು. ನೀವು ಸೀರೆ ಉಡುವ ಬಗ್ಗೆ ಯೋಚಿಸುತ್ತಿದ್ದರೆ ಅದಕ್ಕೂ ಮೊದಲು ಬ್ಲೌಸ್‌ ಡಿಸೈನ್‌ ಅನ್ನು ಗಮನಿಸಬೇಕು. ಟ್ರೆಂಡಿ ಹಾಗೂ ಸಖತ್‌ ಸ್ಟೈಲಿಶ್‌ ಆಗಿ ಕಾಣುವ ಬ್ಲೌಸ್‌ ಡಿಸೈನ್‌ಗಳು ಇಲ್ಲಿವೆ. ಈ ಬ್ಲೌಸ್‌ ಡಿಸೈನ್‌ಗಳು ನಿಮಗೆ ಬೇರೆಯದ್ದೇ ನೋಟ ಸಿಗುವಂತೆ ಮಾಡುವುದು ಸುಳ್ಳಲ್ಲ.

ಈ ಬ್ಲೌಸ್‌ ವಿನ್ಯಾಸ ಗಮನಿಸಿ. ನೆಕ್‌ಗೆ ವಿ ಶೇಪ್‌ ನೀಡಲಾಗಿದೆ. ಸರಳ ಬಟ್ಟೆಯ ಮೇಲೆ ಸುಂದರವಾದ ಎಂಬ್ರಾಯಿಡರಿ ಡಿಸೈನ್‌ ಮಾಡಲಾಗಿದೆ. ನ್ಯೂಡ್‌ ಬಣ್ಣದ ರವಿಕೆಗೆ ಕೆಂಪು ಹಾಗೂ ಕಪ್ಪು ಬಣ್ಣದ ದಾರಗಳಿಂದ ಎಂಬ್ರಾಯಿಡರಿ ಡಿಸೈನ್‌ ಮಾಡಿಸಿರುವುದು ರವಿಕೆಯ ಅಂದ ಹೆಚ್ಚಿಸಿದೆ.

ಇತ್ತೀಚಿನ ದಿನಗಳಲ್ಲಿ ಕಾರ್ಸೆಟ್ ಬ್ಲೌಸ್‌ಗಳು ತುಂಬಾ ಟ್ರೆಂಡ್‌ನಲ್ಲಿವೆ. ಹುಡುಗಿಯರು ಈ ಬ್ಲೌಸ್ ಅನ್ನು ಸೀರೆ, ಲೆಹೆಂಗಾ ಮತ್ತು ಸ್ಕರ್ಟ್ ಧರಿಸಬಹುದು. ರೆಡಿಮೇಡ...