ಭಾರತ, ಫೆಬ್ರವರಿ 27 -- ವಿಶ್ವ ಪ್ರಕೃತಿ ಛಾಯಾಗ್ರಹಣ ಪ್ರಶಸ್ತಿ ವಿಜೇತ ಚಿತ್ರಗಳನ್ನು ಗಮನಿಸಿದರೆ, ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಕ್ಯಾನ್ವಾಸ್ ಮೇಲೆ ಚಿತ್ರ ಬಿಡಿಸಿದಂತೆ ಗೋಚರಿಸುವ ಫೋಟೋಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಿದೆ. ಪ್ರಶಸ್ತಿ ವಿಜೇತ ಫೋಟೋ 1000 ಅಮೆರಿಕನ್ ಡಾಲರ್ ಬಹುಮಾನ ಗಳಿಸಿತು.

ದ್ರಾಕ್ಷಿ ತೋಟದ ನಡುವೆ ಜಿಗಿದೋಡುತ್ತಿವೆ ಎರಡು ಜಿಂಕೆಗಳು. ಈ ಅದ್ಭುತ ದೃಶ್ಯವನ್ನು ಸ್ಲೋವೇನಿಯಾದ ಮರುಸಾ ಪುಹೆಕ್ ಸೆರೆಹಿಡಿದಿದ್ದಾರೆ.

ದೂರದಿಂದ ನವಿಲುಗಳಿರಬಹುದೇನೋ ಎಂಬ ಭಾವನೆ ಮೂಡಿಸುವ ಕೀಟಗಳ ಮ್ಯಾಕ್ರೋ ಇಮೇಜ್‌ ಅನ್ನು ಸೆರೆಹಿಡಿದ್ದಾರೆ ಖಾಯಿಚುಯಿನ್ ಸಿಮ್‌.

ಸ್ವಾಲ್ಬಾರ್ಡ್ ದ್ವೀಪಸಮೂಹದಲ್ಲಿ, ಕೋಲಿನೊಂದಿಗೆ ಆಡುತ್ತಿರುವ ಹಿಮಕರಡಿಯ ನೋಟವನ್ನು ಸೆರೆಹಿಡಿದಿರುವುದು ಟೋಮ್ ನಿಕೆಲ್ಸ್.

ನೀಲಿ ಚುಕ್ಕೆಗಳಿರುವ ಮಡ್‌ಸ್ಕಿಪ್ಪರ್ ಮೀನು ನೀರಿನಿಂದ ಮೇಲೆದ್ದು ಹಾರಿದ ಕ್ಷಣವನ್ನು ಜಾರ್ಜಿನಾ ಸ್ಟೈಟ್ಲರ್ ತಮ್ಮ ಕ್ಯಾಮೆರಾ ಮೂಲಕ ಕ್ಲಿಕ್ಕಿಸಿದ್ದಾರೆ.

ತಾನು ನೇಯ್ದ ಬಲೆಗೆ ಬಿದ್ದ ಮಿಕವನ್ನು ಹಿಡಿಯುತ್ತಿರು...