ಭಾರತ, ಫೆಬ್ರವರಿ 16 -- Delhi Railway Station stampede: ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಶನಿವಾರ (ಫೆ 15) ರಾತ್ರಿ ಭಾರಿ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 15 ಜನ ಗಾಯಗೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಕಾಲ್ತುಳಿತ ಸಂಭವಿಸಿದ ಕೂಡಲೆ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಅಗ್ನಿಶಾಮಕ ಸೇವೆಯ 4 ವಾಹನಗಳು, ಆಂಬುಲೆನ್ಸ್‌ಗಳು ಕೂಡಲೆ ಸ್ಥಳಕ್ಕಾಗಮಿಸಿವೆ. ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂ 14 ಮತ್ತು 15ರಲ್ಲಿ ಶನಿವಾರ ರಾತ್ರಿ 9.55 ರ ಹೊತ್ತಿಗೆ ಈ ದುರಂತ ಸಂಭವಿಸಿದೆ ಎಂದು ವರದಿ ಹೇಳಿದೆ.

ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಭಾರಿ ಕಾಲ್ತುಳಿತ ಮಾದರಿ ದುರಂತ ಸಂಭವಿಸಿದೆ. ಪ್ಲಾಟ್‌ಫಾರಂ ಸಂಖ್ಯೆ 14 ಮತ್ತು 15ರಲ್ಲಿ ಜನದಟ್ಟಣೆ ಹೆಚ್ಚಾಗಿ ಈ ರೀತಿ ಆಗಿದೆ ಎಂದು ಕರೆ ಬಂದಿತ್ತು. ಕೂಡಲೇ ಅಗ್ನಿಶಾಮಕ ಸೇವೆಯ 4 ವಾಹನಗಳ್ನು ಕಳುಹಿಸಲಾಗಿದೆ ಎಂದು ದೆಹಲಿಯ ಅಗ್ನಿಶಾಮಕ ಸೇವೆ ವಕ್ತಾರರು ತಿಳಿಸಿದ್ದಾರೆ.

ಪ್ರಯಾಗ್‌ರಾಜ್‌ಗೆ ಹೋಗುವ ಎರಡು ರೈಲುಗಳು ರದ್ದುಗೊಂಡ ಬಳಿಕ ಪ್ರಯಾಣಿಕ ದಟ್ಟಣೆ ಹೆಚ್ಚಾಗಿತ್...