ಭಾರತ, ಫೆಬ್ರವರಿ 7 -- ಇಂದ್ರಾಕ್ಷಿ ಮಹಾಯಂತ್ರವು ಪ್ರಭಾವಶಾಲಿ ಹಾಗೂ ಶಕ್ತಿಶಾಲಿ ಯಂತ್ರವಾಗಿದೆ. ಈ ಯಂತ್ರವು ದುರ್ಗಾಯಂತ್ರದ ಪ್ರತಿರೂಪ. ಇದರಲ್ಲಿ ಬಳಸುವ ಮಂತ್ರ ಭಾಗವೂ ವಿಶಿಷ್ಟವಾದುದು. ಈ ಯಂತ್ರದಲ್ಲಿ ಬಳಸುವ ರೇಖಾಚಿತ್ರಗಳು ವಿಶೇಷವಾಗಿರುತ್ತವೆ. ಇಂದ್ರಾಕ್ಷಿ ಯಂತ್ರವನ್ನು ಮೂರು ಅಥವಾ ನಾಲ್ಕು ರೀತಿಯಲ್ಲಿ ತಯಾರಿಸಬಹುದಾಗಿದೆ. ಪ್ರತಿ ಯಂತ್ರದಲ್ಲಿಯೂ ನವದುರ್ಗೆಯರು ನೆಲೆಸಿರುತ್ತಾರೆ. ಆದ್ದರಿಂದ ಇಂದ್ರಾಕ್ಷಿ ಯಂತ್ರವನ್ನು ಧರಿಸುವುದು ಅಥವಾ ಬಳಿಯಲ್ಲಿ ಇರಿಸಿಕೊಳ್ಳುವುದು ಸರಿಯಾದ ಕ್ರಮವಾಗುವುದಿಲ್ಲ.

ಇಂದ್ರಾಕ್ಷಿ ಯಂತ್ರವನ್ನು ದೇವರಕೋಣೆಯಲ್ಲಿ ಇರಿಸಿ ಪೂಜಿಸಬೇಕು. ಪೂಜಾಗೃಹದ ಮಧ್ಯಭಾಗದಲ್ಲಿ ಇದನ್ನು ಸ್ಥಾಪಿಸಬೇಕು. ಪೂಜಾಗೃಹ ಇಲ್ಲದಿದ್ದರೆ ಪೂರ್ವದಿಕ್ಕಿನ ಮಧ್ಯಭಾಗದಲ್ಲಿ ಇದನ್ನು ಸ್ಥಾಪಿಸಬೇಕು. ಪ್ರತಿದಿನವೂ ಸಾಧ್ಯವಾಗದ ಪಕ್ಷದಲ್ಲಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಇದನ್ನು ಪೂಜಿಸಬೇಕು. ಮೊಸರು ಅಥವಾ ನಿಂಬೆಹಣ್ಣಿನಿಂದ ತಯಾರಿಸಿದ ಅನ್ನದ ನೈವೇದ್ಯ ಮಾಡಬೇಕು.

ಸೂರ್ಯ ಮುಳುಗ...