Bangalore, ಫೆಬ್ರವರಿ 28 -- ಬೆಂಗಳೂರು: ಬಾಡಿಗೆ ತಾಯಿಯ ಮೂಲಕ ಮಗುವನ್ನು ಮಾಡಿಸಿಕೊಡುವುದಾಗಿ ದಂಪತಿಯನ್ನು ನಂಬಿಸಿ ಬೇರೊಬ್ಬ ಮಹಿಳೆಯ ಮಗುವನ್ನು ಕದ್ದು ನೀಡಿ ತಾಯ್ತನದ ಮೂಲಕ ಪಡೆದ ಮಗು ಎಂದು ನಂಬಿಸಿದ ಪ್ರಕರಣದ ತೀರ್ಪು ಪ್ರಕಟವಾಗಿದೆ. ಬೆಂಗಳೂರಿನ ನಾಗರಭಾವಿಯ ಮನೋರೋಗ ತಜ್ಞೆ ಡಾ. ರಶ್ಮಿ ಶಶಿಕುಮಾರ್‌ ಎಂಬಾಕೆಯೇ ಈ ಕೃತ್ಯ ಎಸಗಿದ ವೈದ್ಯೆ.. ನ್ಯಾಯಾಲಯ ಈಕೆಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 36 ವರ್ಷದ ಡಾ. ರಶ್ಮಿ 2015 ರಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಕ್ಕಳಿಲ್ಲದ ದಂಪತಿಯನ್ನು ಭೇಟಿಯಾಗಿದ್ದರು. ಅವರಿಗೆ ಸ್ವಾಭಾವಿಕವಾಗಿ ಮಗುವಾಗುವ ಸಾಧ್ಯತೆಗಳಿರಲಿಲ್ಲ. ಅವರ ಅನಿವಾರ್ಯತೆಯನ್ನು ಬಂಡವಾಳ ಮಾಡಿಕೊಂಡ ರಶ್ಮಿ, ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಬೆಂಗಳೂರಿನಲ್ಲಿ ಬಾಡಿಗೆ ತಾಯಿಯನ್ನು ಕಂಡುಕೊಂಡಿದ್ದೇನೆ ಎಂದು 2019ರಲ್ಲಿ ದಂಪತಿ ಬಳಿ ಸುಳ್ಳು ಹೇಳಿ ಅವರಿಂದ ಜೈವಿಕ ಮಾದರಿಗಳನ್ನು ಸಂಗ್ರಹಿಸಿ ತಾಯ್...