ಭಾರತ, ಮೇ 11 -- ಕಳೆದ ವರ್ಷದ ನವೆಂಬರ್‌ನಲ್ಲಿ ಸಿನಿಮಾ ಘೋಷಣೆ ಮಾಡಿ, ಸಂಕ್ರಾಂತಿ ಹಬ್ಬಕ್ಕೆ ಕಿರು ಟೀಸರ್‌ ಮೂಲಕವೇ ʻಮಹಾವತಾರ್‌ ನರಸಿಂಹʼ ಚಿತ್ರದ ಟೀಸರ್‌ ಝಲಕ್‌ ಬಿಡುಗಡೆ ಮಾಡಿದ್ದ ಹೊಂಬಾಳೆ ಫಿಲಂಸ್‌ ಇದೀಗ, ಅದೇ ಅನಿಮೇಷನ್‌ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಮೂಲಕ ಇನ್ನೇನು ಮುಂದಿನ ಎರಡು ತಿಂಗಳಲ್ಲಿ ಈ ಸಿನಿಮಾ ಹಲವು ಭಾಷೆಗಳಲ್ಲಿ ಚಿತ್ರಮಂದಿರಕ್ಕೆ ಎಂಟ್ರಿಕೊಡಲಿದೆ. ಹಾಗಾದರೆ ʻಮಹಾವತಾರ್‌ ನರಸಿಂಹʼ ಅನಿಮೇಷನ್ ಸಿನಿಮಾದ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ.

ಹೌದು, ಪೌರಾಣಿಕ ಹಿನ್ನೆಲೆಯ ʻಮಹಾವತಾರ್‌ ನರಸಿಂಹʼ ಎಂಬ ಅನಿಮೇಷನ್‌ ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿ, ಬಿಡುಗಡೆಯ ಹಂತಕ್ಕೆ ತಂದಿದೆ ಹೊಂಬಾಳೆ ಫಿಲಂಸ್‌. ಇದೇ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಐದು ಭಾಷೆಗಳಲ್ಲಿ ಈ ಚಿತ್ರದ ಟೀಸರ್‌ ಬಿಡುಗಡೆ ಮಾಡಿ ಸರ್ಪ್ರೈಸ್‌ ನೀಡಿದ್ದ ಹೊಂಬಾಳೆ ಫಿಲಂಸ್‌, ಇದೀಗ ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಿದೆ. ಈಗಾಗಲೇ ಹಲವು ಅನಿಮೇಷನ್‌ ಸಿನಿಮಾ ನಿರ್ಮಿಸ...