Bengaluru, ಏಪ್ರಿಲ್ 22 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಏಪ್ರಿಲ್ 21ರ ಸಂಚಿಕೆಯಲ್ಲಿ ಜಯಂತ ನರಸಿಂಹನ ಮನೆಗೆ ಹೋಗಿದ್ದಾನೆ. ಅಲ್ಲಿ ಹೋಗಿ ನರಸಿಂಹನ ಮನೆಯವರಲ್ಲಿ ಮಾತನಾಡುತ್ತಾ, ಉಭಯ ಕುಶಲೋಪರಿ ಮಧ್ಯೆ, ಜಯಂತ ಬೇಸರದಲ್ಲಿರುವುದನ್ನು ನರಸಿಂಹ ಗಮನಿಸಿದ್ದಾನೆ. ಅಲ್ಲದೆ, ನಿಮ್ಮ ಪತ್ನಿ ಹೇಗಿದ್ದಾರೆ, ಅವಳ ಆರೋಗ್ಯ ಹೇಗಿದೆ, ಎಲ್ಲ ಕ್ಷೇಮವೇ ತಾನೆ ಎಂದು ಕೇಳಿದ್ದಾರೆ. ಆಗ ಜಯಂತ ಬೇಸರಪಟ್ಟುಕೊಂಡು, ಜಾಹ್ನವಿ ಇಂದು ನನ್ನೊಂದಿಗಿಲ್ಲ, ನನ್ನನ್ನು ಬಿಟ್ಟು ಹೋಗಿದ್ದಾಳೆ. ಅವಳು ತೀರಿಕೊಂಡಿದ್ದಾಳೆ. ಹೀಗಾಗಿ ಅವಳ ನೆನಪಿನಲ್ಲಿ ನಾನು ಕೊರಗುತ್ತಿದ್ದೇನೆ ಎಂದು ಹೇಳುತ್ತಾನೆ. ಅದನ್ನು ಕೇಳಿ ನರಸಿಂಹನ ಮನೆಯವರಿಗೆ ಶಾಕ್ ಆಗುತ್ತದೆ. ಅಷ್ಟೇ ಅಲ್ಲದೇ, ಅವರು ಎಲ್ಲರೂ ಜಯಂತ್‌ಗೆ ಸಮಾಧಾನ ಹೇಳುತ್ತಾರೆ.

ಜಯಂತ್ ಹೇಳಿದ ಮಾತು ಕೇಳಿ ವಿಶ್ವನಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗುತ್ತದೆ. ಅವನು ಕೂಡಲೇ ತನ್ನ ರೂಮ್‌ಗೆ ಹೋಗುತ್ತಾನೆ. ಇತ್ತ ಜಯಂತನಿಗೆ ನರಸಿಂಹ ದೈರ್ಯದ ಮಾತು ಹೇಳುತ್ತಾರೆ. ಮತ...